ಕ್ರೀಡೆಗಳಲ್ಲಿ ಭಾಗವಹಿಸಲು ಪೋಷಕರ ಪ್ರೋತ್ಸಾಹಬೇಕು

ಕ್ರೀಡೆಗಳಲ್ಲಿ ಭಾಗವಹಿಸಲು ಪೋಷಕರ ಪ್ರೋತ್ಸಾಹಬೇಕು

ಮಾಗನೂರು ಶಾಲೆ ಕ್ರೀಡಾಕೂಟದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವೈ.ಎಸ್. ಶಿಲ್ಪ

ದಾವಣಗೆರೆ, ಜ.12-  ಮಕ್ಕಳನ್ನು  ಅಂಕ ಗಳನ್ನು ಪಡೆಯಲು ಪ್ರೋತ್ಸಾಹಿಸುವುದರ ಜೊತೆಗೆ  ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು  – ಪೋಷಕರು ಪ್ರೋತ್ಸಾಹಿಸಬೇಕು ಎಂದು ಪೊಲೀಸ್ ಇನ್ಸ್‌ಪೆಕ್ಟರ್  ವೈ.ಎಸ್. ಶಿಲ್ಪ  ತಿಳಿಸಿದರು.        

ನಗರದ ಮಾಗನೂರು ಬಸಪ್ಪ ಶಾಲಾ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃ ತಿಕ ಹಾಗೂ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದ    ಮುಖ್ಯ ಅತಿಥಿಗಳಾಗಿ ಆಗಮಿಸಿ, ಅವರು ಮಾತನಾಡಿದರು.

ಮಕ್ಕಳು ಮೊಬೈಲ್ ಗೀಳನ್ನು ಬಿಟ್ಟು ಓದಿನ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಮಕ್ಕಳಲ್ಲಿ ಸಾಮಾಜಿಕ  ಹಾಗೂ  ನೈತಿಕ ಮೌಲ್ಯಗಳನ್ನು ಬೆಳೆಸಿದಾಗ ಶಿಕ್ಷಣಕ್ಕೆ ಒಂದು ಅರ್ಥ ಬರುವುದು. ಹಾಗಾಗಿ   ಹೆಚ್ಚಿನ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂದರು. 

ಶಾಲೆಯ ಗೌರವ ಕಾರ್ಯದರ್ಶಿ  ಎಂ.ಬಿ. ಸಂಗಮೇಶ್ವರ ಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ  ಭಾಗವಹಿಸಿ, ಬಹುಮಾನಗಳನ್ನು ಪಡೆದುಕೊಳ್ಳ ಬೇಕು. ಜೊತೆಗೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕೆಂದು ಕರೆ ನೀಡಿದರು.

ದೈಹಿಕ ಶಿಕ್ಷಕ ಎಂ ಎಸ್. ಕರಿಬಸವ ಸ್ವಾಮಿ   ಕ್ರೀಡಾ ವಾರ್ಷಿಕ ವರದಿ ಓದಿದರು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ  ತಾಂತ್ರಿಕ ತಜ್ಞ ಬೆಂಗ ಳೂರಿನ  ಸದ್ವಿಕಾಸ್  ಕೆ.ಎ    ಮತ್ತು  ಬೆಂಗಳೂರು ಮೆಡಿಕಲ್ ಕಾಲೇಜಿನ ಡಾ. ರಾಕೇಶ್ ಜಿ.ವಿ ಅವರು  ಅತಿಥಿಗಳಾಗಿ ಆಗಮಿಸಿದ್ದರು. 

ಸಂಸ್ಥೆಯ ಆಡಳಿತಾಧಿಕಾರಿ ಎಸ್.ಆರ್.ಶಿರಗಂಬಿ, ಶಾಲಾ ಮುಖ್ಯಸ್ಥರಾದ    ಎ.ಎಸ್. ಕುಸುಮ,  ಎಸ್.ಮಂಜುನಾಥ್ ಹಾಗೂ ಶಿಕ್ಷಕ ವೃಂದದವರು  ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ ಕೆ.ಎ, ಮಾನ್ವಿಸಾಗರ್,  ತೇಜಸ್ವಿನಿ  ಟಿ. ಸ್ವಾಮಿ,   ಡಿ. ಜೀವಿತಾ, ಎ.ಬಿ ತ್ರೈಯಂಬಿಕೇಶ್ವರಿ,  ಎಂ.ಧನುಷ್ ರೆಡ್ಡಿ, ಯು.ಪಿ ಯುವರಾಜ್  ಇವರು ಗಳು ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!