ದಾವಣಗೆರೆ, ಜ. 10 – ನಗರದ ಕೊಂಡಜ್ಜಿ ರಸ್ತೆಯ ಆರ್ಟಿಒ ಆಫೀಸ್ ಹತ್ತಿರದ ಶ್ರೀ ಸಿದ್ದಗಂಗಾ ಡಾ. ಶಿವಕುಮಾರ ಸ್ವಾಮೀಜಿ ವೃತ್ತದ ನಾಮಫಲಕ ಅನಾವರಣವನ್ನು ಮಹಾನಗರ ಪಾಲಿಕೆಯ ಮೇಯರ್ ಕೆ. ಚಮನ್ ಸಾಬ್ ಮತ್ತು ಉಪ ಮೇಯರ್ ಸೋಗಿ ಶಾಂತಕುಮಾರ್ ಅವರು ಇಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಸರ್ಕಲ್ ಬಳಗದ ಅಧ್ಯಕ್ಷರಾದ ಶಂಕರ್, ಶಿರೇಕರ್ ಪವರ್ ಮತ್ತು ಬಳಗದ ಗೆಳೆಯರಾದ ಶಿವಕುಮಾರ್, ಜೆ. ಚಂದ್ರಶೇಖರ್, ನರೇಶ್, ಇಟ್ಟಿಗುಡಿ ಆನಂದ್, ರಾಮಚಂದ್ರಪ್ಪ ಹೊಸಮನೆ, ಮುಕುಂದ, ಪರಶುರಾಮ್, ಕಿರಣ ಕುಮಾರ್, ಶಿವಾಚಾರಿ, ನಬಿವುಲ್ಲಾ, ಆನಂದಪ್ಪ, ರೇಣುಕಾ ಫೋಟೋ ಸ್ಟುಡಿಯೋ ವಿನಾಯಕ, ವಿನೋಬ ನಗರ ಸಿದ್ದಗಂಗಾ ಗೆಳೆಯರ ಬಳಗದ ಮಂಜಣ್ಣ, ಶಿವಪ್ರಸಾದ ಕರ್ಜಗಿ ಮತ್ತಿತರರು ಇದ್ದರು.
ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ವೃತ್ತದ ನಾಮಫಲಕ ಅನಾವರಣ
