ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಗ್ರಾಮಸ್ಥರ ಹಾಗೂ ರಂಗನಾಥ ಸ್ವಾಮಿಯ ಸದ್ಭಕ್ತರ ಸಭೆಯನ್ನು ಕರೆಯಲಾಗಿದೆ.
ಪುರಾತನ ಕಾಲದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಶಿಥಿಲಗೊಂಡಿರುವ ಕಾರಣ ದೇವ ಸ್ಥಾನವನ್ನು ಹೊಸದಾಗಿ ನಿರ್ಮಿಸುವ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಗ್ರಾಮದ ಗೌಡ್ರ ಬಸವರಾಜಪ್ಪ ತಿಳಿಸಿದ್ದಾರೆ.