ಮೈದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸರಸ್ವತಿ : ಲಾಟರಿ ಮೂಲಕ ಒಲಿದ ಅದೃಷ್ಟ

ಮೈದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸರಸ್ವತಿ : ಲಾಟರಿ ಮೂಲಕ ಒಲಿದ ಅದೃಷ್ಟ

ಹರಪನಹಳ್ಳಿ, ಜ.7- ತಾಲ್ಲೂಕಿನ ಮೈದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮತ್ತಿಹಳ್ಳಿ ಸರಸ್ವತಿ   ಆಯ್ಕೆಯಾಗಿದ್ದಾರೆ.

ಶಿವಮ್ಮ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಎಂ.ಸರಸ್ವತಿ ಹಾಗೂ ಮೀನಾಕ್ಷಮ್ಮ   ಸ್ಪರ್ಧಿಸಿದ್ದರು. ಇಂದು ನಡೆದ ಚುನಾವಣೆಯಲ್ಲಿ ಇಬ್ಬರಿಗೂ ತಲಾ 10 ಮತಗಳು ಲಭಿಸಿದ ಕಾರಣ,   ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದಾಗ ಎಂ.ಸರಸ್ವತಿ  ಅವರಿಗೆ  ಅದೃಷ್ಟ ಒಲಿಯಿತು.    ಚುನಾವಣಾಧಿಕಾರಿಯಾಗಿ   ತಹಶೀಲ್ದಾರ್ ಗಿರೀಶಬಾಬು   ಕಾರ್ಯನಿರ್ವಹಿಸಿದರು.

ನಂತರ ಸರಸ್ವತಿ ಅವರು  ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನರವರ ನಿವಾಸಕ್ಕೆ ಭೇಟಿ ನೀಡಿ ಸಂತಸವನ್ನು ಹಂಚಿಕೊಂಡರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಬಸಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಗೌಡ, ತಾಪಂ ಮಾಜಿ ಸದಸ್ಯ ಮೈದೂರು ರಾಮಣ್ಣ, ಹೇಮಂತಪ್ಪ, ಲೋಕೇಶಗೌಡ್ರು, ವಿಜಯಕುಮಾರ, ಸಿದ್ದಲಿಂಗಸ್ವಾಮಿ, ಹೆಚ್.ದೇವೆಂದ್ರಗೌಡ, ಎಂ.ಕುಬೇರಪ್ಪ, ಶಿವಣ್ಣ, ಗ್ರಾ.ಪಂ. ಸದಸ್ಯರಾದ ಕೆ.ನಾಗರಾಜ, ಮಹಾಲಿಂಗಯ್ಯ, ಶಿವಕುಮಾರ, ಮಂಜಮ್ಮ ರಾಮಪ್ಪ, ಚಂದ್ರಪ್ಪ ಬಾವಿಹಳ್ಳಿ, ದುರುಗಪ್ಪ ಗೌರಿಪುರ, ನಾಗವೇಣಿ, ಎ.ಶಿವಮ್ಮ, ನಾಗಮ್ಮ, ಸೇರಿದಂತೆ ಇತರರು ಇದ್ದರು.

error: Content is protected !!