ಮಲೇಬೆನ್ನೂರು, ಜ.5- ಭಾನುವಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಮಹಿಳಾ ಶಿಕ್ಷಣದ ಹೋರಾಟಗಾರ್ತಿ ಹಾಗೂ ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿ ಬಾ ಪುಲೆ ಇವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಾನವ ಬಂಧುತ್ವ ವೇದಿಕೆಯ ಹರಿಹರ ತಾ. ಸಂಚಾಲಕ ಉಕ್ಕಡಗಾತ್ರಿ ಮಂಜುನಾಥ್ ದೊಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾವಿತ್ರಿ ಬಾ ಪುಲೆ ಅವರ ವಿವರವಾಗಿ ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಹಾಲಪ್ಪ, ಉಪನ್ಯಾಸಕ ಶಾಂತಪ್ಪ, ಸಾಹಿತಿ ಯು.ಕೆ.ಅಣ್ಣಪ್ಪ ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯ ಹರಿಹರ ತಾ, ಸಹ ಸಂಚಾಲಕ ಹರಳಹಳ್ಳಿ ಮಂಜುನಾಥ್, ಭಾನುವಳ್ಳಿ ಸಂತೋಷ್ ಮತ್ತು ಇತರರು ಭಾಗವಹಿಸಿದ್ದರು.
ಭಾನುವಳ್ಳಿಯಲ್ಲಿ ಅಕ್ಷರದವ್ವ ಸಾವಿತ್ರಿ ಬಾ ಪುಲೆ ಜಯಂತಿ ಆಚರಣೆ
