ಎರೆಹೊಸಳ್ಳಿ ಗ್ರಾಮದಲ್ಲಿನ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್ ಹಿತನುಡಿ
ಮಲೇಬೆನ್ನೂರು, ಜ. 5- ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯು 23ನೇ ಸ್ಥಾನದಲ್ಲಿದೆ. ಅದನ್ನು 10ನೇ ಸ್ಥಾನದೊಳಗೆ ಬರುವಂಥಹ ಮಹತಕ್ಕಾರ್ಯಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಶುಕ್ರವಾರ ಸಂಜೆ ಎರೆಹೊಸಳ್ಳಿ ಗ್ರಾಮದಲ್ಲಿನ ಹೇಮ-ವೇಮ ಸದ್ಭೋದನಾ ವಿದ್ಯಾಪೀಠ, ಜ್ಞಾನಾಕ್ಷಿ ವಿದ್ಯಾನಿಕೇತನ ಮಹಾಯೋಗಿ ವೇಮನ ಪಿ.ಯು ಕಾಲೇಜಿನ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಫಲಿತಾಂಶ ಜಿಲ್ಲೆಯಲ್ಲಿ ಸುಧಾರಿಸಲು ವಿದ್ಯಾರ್ಥಿಗಳ ಪಾಲಕರ ಸಹಕಾರ ಬಹಳ ಮುಖ್ಯ ಎಂದ ಹರೀಶ್ ಅವರು, 2008 ರಲ್ಲಿ ನಾನು ಶಾಸಕನಾಗಿದ್ದ ಸಮಯದಲ್ಲಿ ಎರೆಹೊಸಳ್ಳಿಯಲ್ಲಿ ಹೇಮ-ವೇಮಾನಂದ ಶ್ರೀಗಳ ರೆಡ್ಡಿ ಪೀಠ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮಕ್ಕಳು ಆಟ-ಪಾಠದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೆ ಓದು-ಬರಹದಲ್ಲಿ ಅತ್ಯುತ್ತಮ ಸ್ಥಾನ ಪಡೆಯುವುದರೊಂದಿಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಬೇಕು. ಅದಕ್ಕಾಗಿ ನಿತ್ಯ ಅಧ್ಯಯನ ಮಾಡಬೇಕು. ಯಾವುದೇ ಒತ್ತಡಗಳಿಂದ ಮಾನಸಿಕವಾಗಿ ಕುಗ್ಗದೆ.ಹಿಗ್ಗದೆ ಉತ್ತಮ ಫಲಿತಾಂಶಸದತ್ತ ಗುರಿಹೊಂದಬೇಕೆಂದು ವಿದ್ಯಾಥಿಗಳಿಗೆ ಹರೀಶ್ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ಜಿಲ್ಲೆಯ ಮೀಸಲು ಪೊಲೀಸ್ ಪಡೆಯ ಡಿವೈಎಸ್‍ಪಿ ಪ್ರಕಾಶ್ ಮಾತನಾಡಿ, ಜೇನು ನೊಣವು ಯಾವಾಗಲೂ ಹೊವಿನ ಮೇಲೆ ಕುಳಿತು ಮಕರಂದವನ್ನು ಮಾತ್ರ ಹಿರುತ್ತದೆ, ಶ್ರೀಗಂಧದ ಮರದ ಸುತ್ತ ಅದೇಷ್ಠೂ ವಿಷ ಸರ್ಪಗಳಿದ್ದರೂ ಶ್ರೀಗಂಧವು ವಿಷವಾಗುವುದಿಲ್ಲ. ಹಾಗೆಯೇ ಮಕ್ಕಳು ಡಾ| ಅಬ್ದುಲ್ ಕಲಾಮ್ ಹೇಳಿದಂತೆ ಭಾರತದ ಉಜ್ವಲ ಭವಿಷ್ಯಕ್ಕಾಗಿ ದುಡಿಯುವ ಮಹಾ ಜ್ಞಾನಿಗಳಾಗಬೇಕು.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಗಳು ತಮಗೆ ಸಿಕ್ಕಿರುವ ಉತ್ತಮ ಸಮಯವನ್ನು ಹಾಳುಮಾಡದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಓದು-ಬರಹವನ್ನು ಹೆಚ್ಚಿಸಿಕೊಂಡು. ಜ್ಞಾನವಂತರಾಗಲು ಮುಂದಾಗಬೇಕು. ಪಾಲಕರು ತಮ್ಮ ಮಕ್ಕಳು ವಯೋಮಿತಿಯನ್ನು ಮೀರಿ ಟ್ರ್ಯಾಕ್ಟರ್, ಬೈಕ್, ಕಾರ್ ಓಡಿಸುವುದನ್ನು ಕಲಿಸಲು ಮುಂದಾಗಬಾರದು. ಅವರು ಓದು ಬರಹ ಮುಗಿಸಿ ತಮ್ಮ ಸ್ವಂತ ದುಡಿಮೆಯಲ್ಲಿ ಗಳಿಸುವಂತಹ ಮಾರ್ಗಕ್ಕೆ ಮುಂದುವರೆಯಲು ಮಾರ್ಗದರ್ಶನ ಮಾಡಬೇಕೆಂದು ಪಾಲಕರಿಗೆ ಕರೆನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಎರೆಹೊಸಳ್ಳಿ ಗ್ರಾಮದ ಮಹಾಯೋಗಿ ವೇಮನ ಮಠದ ವೇಮಾನಂದ ಸ್ವಾಮಿಜಿ, ವನಶ್ರೀ ಸಂಸ್ಥಾನ ಮಠದ ಡಾ. ಬಸವಕುಮಾರ ಸ್ವಾಮೀಜಿ ಆರ್ಶಿವಚನ ನೀಡಿದರು.
ಸಂಸ್ಥೆಯ ಹಿರಿಯರಾದ ಬಿಳಸನೂರು ರಂಗಪ್ಪ ರೆಡ್ಡಿ, ಆಡಳಿತಾಧಿಕಾರಿ ಸುಭಾಷ ಹೆಚ್.ಪಿ, ಪ್ರಾಂಶುಪಾಲರಾದ ಕುಂಜುರಾಣಿ, ಮುಖ್ಯೊಪಾಧ್ಯಾಯ ಬಸವರಾಜ್ ಮತ್ತು ಇತರರು ಭಾಗವಹಿಸಿದ್ದರು.