ವಸಾಹತು ಕಾಲದಲ್ಲಿನ ಮಧ್ಯಕರ್ನಾಟಕ ಚರಿತ್ರೆ, ದಾಖಲೆಗಳು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ವಸಾಹತು ಕಾಲದಲ್ಲಿನ ಮಧ್ಯಕರ್ನಾಟಕ ಚರಿತ್ರೆ,  ದಾಖಲೆಗಳು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ಹರಿಹರದ ಸರ್ಕಾರಿ ಕಾಲೇಜಿನಲ್ಲಿ ಇಂದಿನಿಂದ ಎರಡು ದಿನ 

ಹರಿಹರ,ಜ.5-  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ದಿನಾಂಕ 6 ಮತ್ತು 7 ರಂದು ವಸಾಹತು ಕಾಲದಲ್ಲಿನ ಮಧ್ಯಕರ್ನಾಟಕದ ಚರಿತ್ರೆ ಮತ್ತು ದಾಖಲೆಗಳು ವಿಷಯ ಕುರಿತು ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ ಎಂದು ಪ್ರಾಚಾರ್ಯ  ಡಾ ಎಚ್.ವಿರುಪಾಕ್ಷಪ್ಪ  ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ವಿಭಾಗೀಯ ಕಚೇರಿ ಬೆಂಗಳೂರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ  ಜರುಗುವ ಕಾರ್ಯಕ್ರಮವನ್ನು 6 ರಂದು ಬೆಳಿಗ್ಗೆ 10 ಗಂಟೆಗೆ ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸುವರು

ಡಾ.ವಿರುಪಾಕ್ಷಪ್ಪ ಎಚ್. ಅಧ್ಯಕ್ಷತೆ ವಹಿಸುವರು. ಹಂಪಿಯ ಕನ್ನಡ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಾಸುದೇವ ಬಡಿಗೇರ್, ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಸಿ.ಎಚ್.ಮುರುಗೇಂದ್ರಪ್ಪ, ದಾವಣಗೆರೆ ವಿವಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟರಾವ್ ಎಂ.ಪಲಾಟೆ, ರಾಜ್ಯ ಪತ್ರಾಗಾರ ಇಲಾಖೆ ಉಪನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದ ಹಾಗೂ ಇತರರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಸ್ವಾತಂತ್ರ್ಯ ಸಂಗ್ರಾಮ-ಒಂದು ವಿಶ್ಲೇಷಣೆ ಕುರಿತು 1ನೇ ಗೋಷ್ಟಿಯಲ್ಲಿ ಗುಲ್ಬರ್ಗ ವಿವಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ ವಿಷಯ ಮಂಡನೆ ಮಾಡುವರು. ದಾವಣಗೆರೆ ವಿವಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟರಾವ್ ಎಂ.ಪಲಾಟೆ ಅಧ್ಯಕ್ಷತೆ ವಹಿಸುವರು.

ಮಧ್ಯಕರ್ನಾಟಕದಲ್ಲಿ ಅರಣ್ಯ ಸತ್ಯಾಗ್ರಹ ಕುರಿತ 2ನೇ ಗೋಷ್ಟಿಯಲ್ಲಿ ದಾವಣಗೆರೆ ವಿವಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ ಗೌಡ ಪಿ. ವಿಷಯ ಮಂಡನೆ ಮಾಡುವರು. ಬಸವಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಮಂಜಣ್ಣ ಅಧ್ಯಕ್ಷತೆ ವಹಿಸುವರು.

ನಂತರ ಸಂಶೋಧನಾ ಲೇಖನಗಳ ಮಂಡನೆ ನಡೆಯಲಿದ್ದು ದಾವಣಗೆರೆ ವಿವಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಹೊನ್ನೂರುಸ್ವಾಮಿ ಎಚ್. ಅಧ್ಯಕ್ಷತೆ ವಹಿಸ ಲಿದ್ದು, ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎನ್.ಮಲ್ಲಯ್ಯ ನಿರೂಪಿಸುವರು.

ನಾಡಿದ್ದು ದಿನಾಂಕ 7 ರಂದು ಬೆಳಿಗ್ಗೆ ಮಧ್ಯ ಕರ್ನಾಟಕದಲ್ಲಿನ ಮಠಗಳ ಕೊಡುಗೆಗಳು ವಿಷಯ ಕುರಿತ ದಾವಣಗೆರೆ ಎಆರ್‍ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಕೇಶ್ ಬಿ.ಸಿ. ವಿಷಯ ಮಂಡಿಸುವರು. ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ರಾಜಕುಮಾರ್ ಎಂ. ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 12ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಗುಲ್ಬರ್ಗ ವಿವಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಸಮಾರೋಪ ಭಾಷಣ ಮಾಡುವರು. 

ಡಾ.ಅನಂತನಾಗ್ ಎಚ್.ಪಿ., ಡಾ.ನೆಲ್ಕುದ್ರಿ ಸದಾನಂದ, ಡಾ.ಬಿ.ಪಿ.ಕುಮಾರ, ಡಾ.ಮಲ್ಲಿಕಾರ್ಜುನ ಜವಳಿ, ಜಿ.ಎಂ.ಮುರಿಗಿಸ್ವಾಮಿ, ಬಸವರಾಜಯ್ಯ ಎನ್.ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.

ಗೋಷ್ಟಿಯಲ್ಲಿ ಐಕ್ಯುಎಸಿ ಸಂಚಾಲಕ ಡಾ.ಅನಂತನಾಗ್ ಎಚ್.ಪಿ., ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಯತೀಸ್ ಎಲ್.ಕೊಡಾವತ್, ಡಾ.ಮಂಜುನಾಥ್, ಡಾ.ತಿರುಮಲ, ಡಾ.ಯೋಗೀಶ್, ಅಬ್ದುಲ್ ಬಶೀರ್, ಡಾ.ತಿಪ್ಪೇಸ್ವಾಮಿ ಎಚ್., ಗ್ರಂಥಪಾಲಕ ಡಾ.ಚಿದಾನಂದಪ್ಪ ಇದ್ದರು.

error: Content is protected !!