ದಾವಣಗೆರೆ, ಜ. 3 – ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕೋಲಾರದಲ್ಲಿ ನಡೆಯುವ ಕರ್ನಾಟಕ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವ ಬಾಲಕ ಮತ್ತು ಬಾಲಕಿಯರ ತಂಡದ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮವಸ್ತ್ರ ವಿತರಿಸಿ ಮಾತನಾಡಿದ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು, ಜಿಲ್ಲೆಯ ಪ್ರತಿಯೊಂದು ಕ್ಷೇತ್ರಕ್ಕೂ ಶಾಮನೂರು ಮನೆತನ ತಮ್ಮದೇ ಆದ ಕೊಡುಗೆ ನೀಡಿದ್ದು, ಪ್ರತಿಯೊಂದು ಜಾತಿ, ಧರ್ಮಕ್ಕೂ ಸಮಾನ ಅವಕಾಶ ಕಲ್ಪಿಸಿದ ಕೀರ್ತಿ ಸಲ್ಲುತ್ತದೆ ಎಂದರು.
ಈ ಹಿಂದೆ ಎಸ್.ಎಸ್. ಆಸ್ಪತ್ರೆ ಪ್ರಾರಂಭದ ವೇಳೆ ನೂರಾರು ಕ್ರೀಡಾ ಪಟುಗಳಿಗೆ ಜಾತಿ, ಧರ್ಮ, ನೋಡದೇ ಕೆಲಸ ನೀಡಲಾಯಿತು. ಮಲ್ಲಿಕಾರ್ಜುನ್ ಅವರು ಕ್ರೀಡಾ ಸಚಿವರಾದ ವೇಳೆ ಕ್ರೀಡಾ ಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು ಎಂದು ತಿಳಿಸಿದರು.
ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಸಂಘದ ಅಧ್ಯಕ್ಷ ಎಂ. ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಕ್ರೀಡಾ ಪ್ರೋತ್ಸಾಹಕ ಮುಸ್ತಾಫ್, ಜಯ ಪ್ರಕಾಶ್ ಗೌಡ, ಅಸೋಸಿಯೇಷನ್‍ನ ಶಂಕರ್ ಗಣೇಶ್, ರಾಮಣ್ಣ, ಜಗದೀಶ್, ಎನ್. ನಾಗರಾಜ್, ರಮೇಶ್, ಪೊಲೀಸ್ ಅಜಯ್‍ಕುಮಾರ್, ಮುಖ್ಯ ಶಿಕ್ಷಕ ನಾಗರಾಜ್, ಮಾರಪ್ಪ, ಮುರುಗನ್, ಬಸವರಾಜ್ ವಾರ್ತಾ ಇಲಾಖೆ ಮತ್ತಿತರರಿದ್ದರು.