ಆತ್ಮಬಲದಿಂದ ಜೀವನ ನಡೆಸಿದರೆ ಯಶಸ್ಸು

ಆತ್ಮಬಲದಿಂದ ಜೀವನ ನಡೆಸಿದರೆ ಯಶಸ್ಸು

ಹಾಲುವರ್ತಿ ಮಠದಲ್ಲಿ ಅರಿವಿನ ಬೆಳಗು ದತ್ತಿ ಕಾರ್ಯಕ್ರಮದಲ್ಲಿ ನೀಲಗುಂದ ಶ್ರೀಗಳು

ಹರಪನಹಳ್ಳಿ, ಡಿ. 30- ದೇವರ ಫೋಟೋ ಬದಲು ಬುದ್ದ, ಬಸವ ಮತ್ತು ಅಂಬೇಡ್ಕರ್‌ರಂತಹ ಮಹಾನ್ ಪುರುಷರ ಫೋಟೋಗಳನ್ನು ಮನೆಯಲ್ಲಿ ಹಾಕಿಕೊಳ್ಳಿ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ  ಸಲಹೆ ನೀಡಿದರು.

ಪಟ್ಟಣದ ಹೊರ ಹೊಲಯದಲ್ಲಿರುವ ಹಾಲವರ್ತಿ ಮಠದಲ್ಲಿ ಕದಳಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೈಸೂರು ಚಂದ್ರಮ್ಮ ಮತ್ತು ಬಸವಲಿಂಗಪ್ಪನವರ `ತಿಂಗಳ ಅರಿವಿನ ಬೆಳಗು’ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿ ದರು.

ಹೀಗೆ ಬುದ್ದ, ಬಸವ, ಅಂಬೇಡ್ಕರ್‌ರವರ   ತತ್ವ ಆದರ್ಶಗಳನ್ನು ಮತ್ತು ಅವರು ನೀಡಿರುವ  ಸಂಸ್ಕಾರ, ಶಿಕ್ಷಣದ ಅರಿವನ್ನು ಮಕ್ಕಳಿಗೆ ನೀಡಿದರೆ, ಮನೆಯು ಆರ್ಥಿಕ ವಾಗಿ, ಸಾಮಾಜಿಕವಾಗಿ ಉತ್ತಮ ಗುಣಮಟ್ಟ ದಲ್ಲಿ ಸಾಗಲು ಅನುಕೂಲವಾಗುತ್ತದೆ ಎಂದರು.

ದೇವರುಗಳನ್ನು ನಂಬಿದರೆ ಫಲ ದೊರೆಯುವುದಿಲ್ಲ, ಹಣ, ಚಿನ್ನ ನೀಡುವುದರಿಂದ ಪುರೋಹಿತರು ಸಿರಿವಂತ ರಾಗುತ್ತಾರೆ, ಅದು ದೇವರಿಗೆ ಸಮರ್ಪಣೆಯಾಗುವು ದಿಲ್ಲ, ಅದರ ಹೊರತು ಶಿಕ್ಷಣವನ್ನು ನೀಡಿ, ಕೈಯಲ್ಲಿರುವ ರೇಖೆಯನ್ನು ನಂಬಿ ಜೀವಿಸಬೇಡಿ, ನಿಮ್ಮಲ್ಲಿರುವ ಆತ್ಮಬಲದಿಂದ ಜೀವನ ವನ್ನು ಸಾಗಿಸಿದರೆ ಯಶಸ್ಸು ದೊರೆಯುತ್ತದೆ ಎಂದರು.

ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಯಾವುದೇ ಕಾರಣಗಳು ಇಲ್ಲದೆ  ಯಾವ ಕಾರ್ಯಗಳೂ ಜರುಗುವುದಿಲ್ಲ. ಎಲ್ಲಾ ದೇವರ ಪೂರ್ವಾರ್ಜಿತ ಅನುಗ್ರಹದಿಂದಲೇ ನಡೆಯುತ್ತವೆ. ಜೀವನದಲ್ಲಿ ಕಾಮ, ಕ್ರೋಧ, ಲೋಭ, ಮದ-ಮತ್ಸರಗಳನ್ನು ತ್ಯಜಿಸಿ ಜೀವಿಸಬೇಕು. ಆಗ ಜೀವನವು ನಿರ್ಲಿಪ್ತ ಜೀವನವಾಗುತ್ತದೆ, ಸತ್ಸಂಗದ ಮೊರೆ ಹೋದರೆ ಜೀವನದಲ್ಲಿ ಮೋಕ್ಷ ದೊರೆಯುತ್ತದೆ ಎಂದರು.

ಸತ್ಯದ ಮಾರ್ಗದಲ್ಲಿ ನಡೆಯಲು ಉತ್ತಮ‌ ಗುರುವಿನ ಮೊರೆ ಹೋಗುವ ಅಗತ್ಯವಿದೆ, ಜೀವನದ ಬಂಧನಕ್ಕೆ ಒಳಗಾಗದೇ  ಬೆಳಕನ್ನು ಪಡೆಯುವ ಮಾರ್ಗದೆಡೆಗೆ ಸಾಗಿರಿ ಎಂದು ಅವರು ಕರೆ ನೀಡಿದರು.

ಎಂ. ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ಮಹಿಳೆ ಯರಿಗೆ ಇಂದು ಎಲ್ಲಾ ರಂಗಗಳಲ್ಲೂ ಪ್ರಾಧಾನ್ಯತೆ ಸಿಗಲು ಬಸವಣ್ಣನವರ ಆದರ್ಶಗಳು ಪ್ರಮುಖ ಪಾತ್ರ ವಹಿಸುತ್ತವೆ, ಬಸವಣ್ಣನವರು ಒಬ್ಬ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದರು ಎಂದರು.  

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಷಣ್ಮುಖ ಪೂಜಾರ್ ಹಾಗೂ   ಜೆ. ಬಿ. ನೂರ್ ಜಹಾನ್ ಬೇಗಂ ಅವರು ವಿಶೇಷ ಉಪನ್ಯಾಸ ನೀಡಿದರು.

ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಇಂದುಮತಿ, ದತ್ತಿ  ದಾನಿಗಳಾದ ಮೈಸೂರು ಭರ್ಮಪ್ಪ, ಕೆ.ಎಂ. ಗುರುಸಿದ್ದಯ್ಯ, ಚಂದ್ರಶೇಖರ ಪೂಜಾರ್, ಸಾಹಿತಿಗಳಾದ ಬಣಕಾರ ರಾಜಶೇಖರ್‌ ಬಾಗಳಿ,   ಹೇಮಣ್ಣ ಮೋರಿಗೆರೆ, ವಿ. ಜಿ. ಜಯಶ್ರೀ, ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷ ಎ. ಕೆ. ಸಂತೋಷ, ಎ. ಕರಿಬಸಪ್ಪ, ಎ. ಕೊಟ್ರಪ್ಪ, ಟಿ.ಎಚ್. ಎಂ ಕೊಟ್ರಯ್ಯ, ಕೆ. ಎಂ. ಕೊಟ್ರಯ್ಯ, ಐ. ಬಸವರಾಜಪ್ಪ, ಶಂಕ್ರಪ್ಪ ಮಾಸ್ಟರ್ ಹಾಗೂ ಇತರರು ಇದ್ದರು.

error: Content is protected !!