ಮಲೇಬೆನ್ನೂರು, ಡಿ. 29 – ವಡೆಯರ ಬಸವಾಪುರ ಗ್ರಾಮದಲ್ಲಿ ಗುರುವಾರ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ 56 ನೇ ವರ್ಷದ ಹುಟ್ಟುಹಬ್ಬವನ್ನು ಬಸವಾಪುರ, ಮಲೇಬೆನ್ನೂರು, ಜಿಗಳಿ, ಜಿ. ಬೇವಿನಹಳ್ಳಿ, ಹಳ್ಳಿಹಾಳ್, ಕೊಕ್ಕನೂರು, ಕೆ.ಎನ್. ಹಳ್ಳಿ, ವಾಸನ, ಗೋವಿನಹಾಳ್, ನಂದಿತಾವರೆ ಸೇರಿದಂತೆ ಮತ್ತಿತರ ಗ್ರಾಮಗಳ ಭಕ್ತರು ಸೇರಿ ಆಚರಿಸಿದರು.
ಈ ವೇಳೆ ಬೃಹತ್ ಕೇಕ್ ಕತ್ತರಿಸಿ ಮಾತನಾಡಿದ ಶ್ರೀಗಳು, ನಿಮ್ಮ ಈ ಪ್ರೀತಿ, ಅಭಿಮಾನಕ್ಕೆ ನಾವು ಚಿರಋಣಿ ಎಂದು ಭಾವುಕರಾದರು. ನಂದೀ ಶ್ವರ ಶ್ರೀಗಳು ಮೈಸೂರಿನ ಮಠವೊಂದರಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.