ದಾವಣಗೆರೆ, ಡಿ. 29- ನಗರದ ವಿಶ್ವ ಭಾರತಿ ವಿದ್ಯಾಪೀಠ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
1971ನೇ ಸಾಲಿನ ವಿದ್ಯಾರ್ಥಿಗಳಿಂದ ಈ ವರೆಗಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
ಇದೇ ವೇಳೆ ವಿಶ್ವ ಭಾರತಿ ವಿದ್ಯಾ ಪೀಠದ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಎಂ.ಸಿ ಗೂಳಪ್ಪನವರ್, ಶಾಲೆಯ ಸಂಸ್ಥಾಪಕರ ಪುತ್ರ ಕೃಷ್ಣ ಕೆಂಗೋ, ಜಿ.ವಿ ಶಿವರಾಜ್, ಎನ್.ಜಿ ಬಸವರಾಜಪ್ಪ, ಡಿ.ಗಂಗಾ ನಾಯ್ಕ, ಜಿ.ಎನ್. ಸುರೇಶ್, ಕೆ. ವಿಜಯ್ ಕುಮಾರ್, ನಾಗಭೂಷಣಯ್ಯ, ಚನ್ನಬಸಪ್ಪ ಸಂಗಣ್ಣ ನವರ್, ಲಕ್ಷ್ಮಿದೇವಿ, ತೆಲಗಿ ವೀರಭದ್ರಪ್ಪ, ಕುಮಾರ್, ಮಲ್ಲೇಶ್ ಸೇರಿದಂತೆ, ಹಳೇ ವಿದ್ಯಾರ್ಥಿಗಳಿದ್ದರು.