ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ವರ ದಾನಮ್ಮನವರ
ರಾಣೇಬೆನ್ನೂರು, ಡಿ. 17 – ದೇಶದ ವರ್ತಮಾನ ಪರಿಸ್ಥಿತಿ ಬದಲಾಯಿಸಿ ವೈಭವಯುತ ವಾದ ಹೊಸ ದೇಶ ಕಟ್ಟುವ ಶಕ್ತಿ ಯುವಕರಲ್ಲಿದೆ. ಕೇವಲ ಭೌಗೋಳಿಕವಾಗಿ ಯೋಚಿ ಸದೆ, ಭಾವನಾತ್ಮಕವಾಗಿ ಒಂದು ಗೂಡಿಕೆಯೊಂದಿಗೆ ಹೊಸ ರಾಷ್ಟ್ರ ನಿರ್ಮಾಣಕ್ಕೆ ಯುವಕರು ಸಜ್ಜಾಗಬೇಕು ಎಂದು ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ವರ ದಾನಮ್ಮನವರ ಹೇಳಿದರು.
ಅವರು ಇಂದು ಸಂಜೆ ರೋಟರಿ ಕ್ಲಬ್ ನವರ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಸುವರ್ಣ ಸಂಭ್ರಮ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಅತಿಥಿಯಾಗಿ ಮಾತನಾಡುತ್ತಿದ್ದರು.
ವರ ದಕ್ಷಿಣೆ ಮುಂತಾದ ಸಾಮಾಜಿಕ ಪಿಡುಗುಗಳನ್ನು ವಿರೋಧಿಸಿ, ಸೌಹಾರ್ದ ಯುತ ಸಾಂಸ್ಕೃತಿಕ ವೈಭವ ಮೆರಸುವಂತಹ ರಾಷ್ಟ್ರ ನಿರ್ಮಾಣ ಇಂದಿನ ಯುವಕರದ್ದಾಗಿ ದ್ದು. ಆ ದಿಶೆಯಲ್ಲಿ ಯುವ ಶಕ್ತಿ ಹೆಜ್ಜೆ ಹಾಕಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ಕಬ್ಬಿಣ, ಉಕ್ಕು ಹಾಗೂ ಮಿಂಚಿನ ಗುಣಗಳನ್ನು ಹೊಂದಿದ ಯುವಕರಿಂದ ಅದು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಆಶಯ ವ್ಯಕ್ತಪಡಿಸಿದರು.
ಕೋವಿಡ್ ಸಂದರ್ಭದಲ್ಲೂ ಸಹ ಸಂಸ್ಥೆಯ ಸಿಬ್ಬಂದಿಗೆ ಹಾಗೂ ಮಕ್ಕಳ ವಿದ್ಯಾ ಭ್ಯಾಸಕ್ಕೆ ತೊಂದರೆ ಆಗದಂತೆ ಸಂಸ್ಥೆಯ ಆಡಳಿತ ಮಂಡಳಿ ಅವರು ನೋಡಿಕೊಂಡಿರು ವುದು ಪ್ರಶಂಸನೀಯ, ಸಂಸ್ಥೆ ಐವತ್ತರಿಂದ ನೂರಾಗಲೀ, ದೀರ್ಘಕಾಲ ಇದೇ ಸಿದ್ಧಾಂತದಿಂದ ಸಂಭ್ರಮಿಸಲಿ ಎಂದು ಶುಭ ಹಾರೈಸಿ ಇಲ್ಲಿ ಓದುವ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಲಿ ಎಂದು ಜಿಲ್ಲಾಧಿಕಾರಿಗಳು ಆಶಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ಅಧ್ಯಕ್ಷತೆ ವಹಿಸಿದ್ದರು, ಡಿಡಿಪಿಐ ಸುರೇಶ ಹುಗ್ಗಿ, ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ, ಕ್ಲಬ್ ಅಧ್ಯಕ್ಷ ವೀರೇಶ ಮೋಟಗಿ, ನಿರ್ದೇಶಕ ಅರವಿಂದ ಜೈನ್, ಉಮೇಶ ಹೊನ್ನಾಳಿ, ವಿ.ಪಿ. ಪೊಲೀಸ್ ಗೌಡ್ರ, ಕುಮಾರ ಮುಷ್ಟಿ ಮತ್ತಿತರರಿದ್ದರು. ಮುಖ್ಯೋಪಾಧ್ಯ ಯಿನಿ ಕೆ. ಗೀತಾ ಸ್ವಾಗತಿಸಿದರು. ಪ್ರಾಚಾರ್ಯ ಕೆ.ಎನ್. ಆರಿಕಟ್ಟಿ ವಂದಿಸಿದರು, ನಿರ್ದೇಶಕ ಶಂಕರ ಗೌಡ ಮಾಳಗಿ ಅತಿಥಿಗಳನ್ನು ಪರಿಚ ಯಿಸಿದರು. ಕೊನೆಯಲ್ಲಿ ವಿಧ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು.