ರಾಣೇಬೆನ್ನೂರು ಎಸ್‌ಟಿಜೆ ಕಾಲೇಜ್ ಕಾರ್ಯಕ್ರಮದಲ್ಲಿ ಎಸ್.ಜಿ. ಮಾಕನೂರು
ರಾಣೇಬೆನ್ನೂರು,ಡಿ.16- `ಎಥ್ನಿಕ್ ಡೇ’ ಎಂದರೆ ಒಂದೇ ದಿನದಲ್ಲಿ ಬೇರೆ ಬೇರೆ ಸಂಸ್ಕೃತಿಗಳನ್ನು ಆಚರಿಸುವ ದಿನ. ಈ ಡಿಜಿಟಲ್ ಯುಗದಲ್ಲಿ ಹಳೆಯದ್ದನ್ನು ಮರೆಯದೇ ಎಲ್ಲರೂ ಒಟ್ಟಾಗಿ ನಮ್ಮ ಸಂಸ್ಕೃತಿಯ ಉಡುಗೆ-ತೊಡುಗೆ ಪ್ರದರ್ಶಿಸಿ ವಿವಿಧತೆಯಲ್ಲಿ ಏಕತೆ ಎಂಬ ಮಹತ್ವ ಸಾರಬೇಕೆಂಬುದು ಈ ಆಚರಣೆಯ ಮುಖ್ಯ ಉದ್ದೇಶ ವಾಗಿದೆ ಎಂದು ಪ್ರಾಚಾರ್ಯ ಡಾ.ಎಸ್.ಜಿ.ಮಾಕನೂರು ತಿಳಿಸಿದರು.
ಇಲ್ಲಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ `ಎಥ್ನಿಕ್ ಡೇ’ ಸಾಂಪ್ರದಾಯಿಕ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಚಟುವಟಿಕೆಗಳ ನಡುವೆ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯಕವಾಗಿದೆ ಎಂದು ಹೇಳಿದರು.
ಹುಡುಗರು ಧರಿಸಿದ್ದ ಜುಬ್ಬಾ, ಪಂಚೆ ಶರ್ಟ್, ಪೈಜಾಮ, ಕುರ್ತಾ ಮುಂತಾದ ಸಾಂಪ್ರದಾಯಿಕ ಉಡುಪು ಗಳು, ಮೊಳಕಾಲ್ಮೂರು, ಬನಾರಸ್, ಕಾಂಚಿಪುರಂ, ಇಳಕಲ್ ಸೇರಿದಂತೆ ವಿವಿಧ ಸೀರೆಗಳನ್ನು ಧರಿಸಿದ ವಿದ್ಯಾರ್ಥಿನಿಯರು ಗಮನಸೆಳೆದರು.
ಕಾರ್ಯಕ್ರಮದ ಸಂಯೋಜಕ
ಪ್ರೊ. ಸಿ. ಎಂ. ಪರಮೇಶ್ವರಪ್ಪ ಹಾಗೂ ಸಿಬ್ಬಂದಿ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.