ರಾಣೇಬೆನ್ನೂರು, ಡಿ. 13 – ಸುಮಾರು ಎರಡು ಕಿ.ಮೀ ಗೂ ಹೆಚ್ಚು ದೂರದಲ್ಲಿರುವ ನಗರದ ಹೊರ ವಲಯ ಹಲಗೇರಿ ರಸ್ತೆಯ ಎಸ್ ಆರ್ ಕೆ ಬಡಾವಣೆಯಲ್ಲಿರುವ ಪರಿಶಿಷ್ಟ ಜಾತಿ ಸರ್ಕಾರಿ ವಸತಿ ನಿಲಯದ ಬಳಿ ಸರ್ಕಾರಿ ಬಸ್ ನಿಲುಗಡೆ ಮಾಡಿ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ತಪ್ಪಿಸುವಂತೆ ಎಸ್‌ಎಫ್‌ಐ ನಿಂದ ಸಾರಿಗೆ ಸಂಸ್ಥೆಗೆ ಇಂದು ಮನವಿ ಸಲ್ಲಿಸಲಾಯಿತು.
ಇಲ್ಲಿ ಸಂಚರಿಸುವ ಹಿರೇಕೇರೂರು, ಶಿಕಾರಿಪುರ, ತುಮ್ಮಿನಕಟ್ಟಿ, ನಂದಿಹಳ್ಳಿ, ಹಳ್ಳೂರು ಮುಂತಾದ ಎಲ್ಲ ಬಸ್ ಗಳಿಗೂ ನಿಲುಗಡೆ ಮಾ ಡಬೇಕು ಹಾಗೂ ಅವುಗಳಲ್ಲಿರುವ ಮಹಿಳಾ ಕಂಡಕ್ಟರ್ ಗಳು ವಿದ್ಯಾರ್ಥಿಗಳ ಜೊತೆ ಅನುಚಿತವಾಗಿ ವರ್ತಿಸುವದನ್ನು ಬಿಡುವಂತೆ ತಿಳುವಳಿಕೆ ನೀಡುವಂತೆ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಮಾಡಲಾಯಿತು.
ಎಸ್‌ಎಫ್‌ಐ ಪದಾಧಿಕಾರಿಗಳಾದ ನಂದೀಶ ಕುರುವತ್ತಿ, ಹಾಲಸ್ವಾಮಿ, ನಂದೀಶ ಅಸ್ವಾಲಿ, ಬಿ.ಕೆ. ಅಶ್ವಿನಿ, ಬಿ. ನಾಗವೇಣಿ, ಎಂ.ಆರ್. ಶೈಲಾ, ನಿವೇದಿತಾ, ಐಶ್ವರ್ಯ, ಪುನೀತ ಬಣಕಾರ, ಎಸ್.ಎಫ್. ಪಾಟೀಲ, ಎಂ.ಆರ್. ಕುಮಾರ, ನಾಗರಾಜ, ದೀಪಿಕಾ ವಡವಿ, ಎಂ.ಬಿ. ಶಂಕರ, ಪ್ರಕಾಶ ಬಣಕಾರ ಮತ್ತಿತರರಿದ್ದರು.