ರಾಣೇಬೆನ್ನೂರು,ಡಿ.11- ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು, ಆಹಾರ, ಉತ್ತಮ ಪರಿಸರವನ್ನು ಕೊಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಬಿ.ಎ.ಜೆ.ಎಸ್.ಎಸ್ ಸ್ವತಂತ್ರ ಪದವಿ-ಪೂರ್ವ ಮಹಿಳಾ ಕಾಲೇಜು ಆಡಳಿತಾಧಿಕಾರಿ ಡಾ.ಆರ್.ಎಮ್ ಕುಬೇರಪ್ಪ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಬಿ.ಎ.ಜೆ.ಎಸ್.ಎಸ್. ಸ್ವತಂತ್ರ ಪದವಿ-ಪೂರ್ವ ಮಹಿಳಾ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ. ಸರಿತಾ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ವಿದ್ಯಾರ್ಥಿನಿಯರು ಮಾನವ ಸರಪಳಿ ಕಾರ್ಯಕ್ರಮ ನಡೆಸಿ, ಪರಿಸರ ಕಾಳಜಿ ಕುರಿತಂತೆ ಅರಿವು ಮೂಡಿಸಿದರು.
ಪ್ರಾಚಾರ್ಯ ಹೆಚ್.ಬಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ ಕುಡಪಲಿ, ಕೆ.ಎಂ.ಕೋರ್ಲಹಳ್ಳಿ, ಮಲ್ಲಿಕಾರ್ಜುನ ಪಿ.ಎಂ., ದೇವೇಂದ್ರಪ್ಪ ಪಿ.ಎಸ್, ಪ್ರಶಾಂತ ಕೆ, ಶ್ರೀಮತಿ ಲತಾ ಧೂಳೆಹೊಳೆ, ಬೀರೇಶ ಚೌಡಣ್ಣನವರ, ಅಶೋಕ ಬಣಕಾರ, ಲಚ್ಚನಾಯ್ಕ ಎಲ್., ಕು.ನೇತ್ರಾ ಆರ್. ಉಪಸ್ಥಿತರಿದ್ದರು.
ಶ್ರೀಮತಿ ಶಾರದಾ ವಾಲಿ ನಿರೂಪಣೆ ಮಾಡಿದರು. ಎ.ಶಂಕರನಾಯ್ಕ ಸ್ವಾಗತಿಸಿದರು. ವಂದನಾರ್ಪಣೆಯನ್ನು ಎಂ.ಎನ್. ರಾಜು ನೆರವೇರಿಸಿದರು.