ಮಲೇಬೆನ್ನೂರು, ಡಿ. 11- ಮಂಗಳವಾರ ವಿಧಿವಶರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು 2009ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಮಲೇಬೆನ್ನೂರಿಗೆ ಆಗಮಿಸಿದ್ದರು.
ಕೊಮಾರನಹಳ್ಳಿ ಸಮೀಪದ ಗುಡ್ಡದ ಜಮೀನಿನಲ್ಲಿ ತಾತ್ಕಾಲಿಕವಾಗಿ ತಯಾರು ಮಾಡಿದ್ದ ಹೆಲಿಪ್ಯಾಡ್‌ನಲ್ಲಿ ಎಸ್.ಎಂ. ಕೃಷ್ಣ ಅವರು ಆಗಮಿಸಿದ್ದ ಹೆಲಿಕ್ಯಾಪ್ಟರ್ ಅನ್ನು ಲ್ಯಾಂಡಿಂಗ್ ಮಾಡಿಸಲಾಗಿತ್ತು.
ನಂತರ ಅವರು, ಮಲೇಬೆನ್ನೂರಿನ ನೀರಾವರಿ ಇಲಾಖೆಯ ಮೈದಾನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಎಸ್.ಎಸ್. ಮಲ್ಲಿಕಾರ್ಜುನ್ ಪರವಾಗಿ ಮತಯಾಚನೆ ಮಾಡಿದ್ದರು.
ಪ್ರಚಾರ ಸಭೆ ಮುಗಿದ ಬಳಿಕ ಬೆಣ್ಣೆಹಳ್ಳಿ ಸಿದ್ದಲಿಂಗಪ್ಪ ಅವರ ಮನೆಯಲ್ಲಿ ಊಟ ಮಾಡಿಕೊಂಡು ಪುನಃ ಹೆಲಿಕ್ಯಾಪ್ಟರ್‌ನಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದರೆಂದು ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಅವರು ಎಸ್.ಎಂ. ಕೃಷ್ಣ ಅವರು ತಮ್ಮ ಮನೆಗೆ ಭೇಟಿ ನೀಡಿದ್ದ ಕ್ಷಣವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು.
ಎಸ್.ಎಂ. ಕೃಷ್ಣ ಅವರೊಂದಿಗೆ ಡಾ. ಜಿ. ಪರಮೇಶ್ವರ್, ಹೆಚ್. ಆಂಜನೇಯ, ಡಾ. ವೈ. ನಾಗಪ್ಪ, ಅಬ್ದುಲ್ ಜಬ್ಬಾರ್, ಎಸ್.ಎಸ್. ಗಣೇಶ್, ಹೆಚ್.ಜಿ. ಗುರುಸಿದ್ದಪ್ಪ, ಕೆ.ಪಿ. ಸಿದ್ದಬಸಪ್ಪ, ಡಾ. ಎಂ.ಜಿ. ರಂಗನಾಥ್, ಅಜ್ಮಲ್ ಖಾನ್, ಕೊಕ್ಕನೂರು ಸೈಯದ್ ಖಾಸಿಂ ಸಾಬ್, ದ್ಯಾಮಣ್ಣ, ಡಾ. ಬಿ. ಚಂದ್ರಶೇಖರ್, ಪಿ.ಎಸ್. ಹನುಮಂತಪ್ಪ, ಎಂ.ಬಿ. ರೋಷನ್ ಸಾಬ್, ಎ. ಆಸೀಫ್ ಅಲಿ, ತಳಸದ ಬಸವರಾಜ್, ಬೆಣ್ಣೆಹಳ್ಳಿ ಬಸವರಾಜಪ್ಪ, ಹಾಲಿವಾಣದ ಎಸ್.ಜಿ. ಪರಮೇಶ್ವರಪ್ಪ, ಕುಂಬಳೂರಿನ ಮಾಗಾನಹಳ್ಳಿ ಹಾಲಪ್ಪ, ವೈ. ವಿರೂಪಾಕ್ಷಪ್ಪ, ನಿಟ್ಟೂರು ಏಕಾಂತಪ್ಪ, ಬೇವಿನಹಳ್ಳಿ ಬಿ.ಕೆ. ನಂದಿಗೌಡ್ರು, ಜಿಗಳಿ ಆನಂದಪ್ಪ, ಹಳ್ಳಿಹಾಳ್ ವೀರನಗೌಡ, ಮಲ್ಲನಗೌಡ, ಚಂದ್ರಶೇಖರ್, ಕೊಮಾರನಹಳ್ಳಿ ಎಸ್. ರಂಗಪ್ಪ, ಶ್ರೀಮತಿ ಸರೋಜಮ್ಮ ಭರಮಗೌಡ, ಕೆ.ಜಿ. ಮಂಜುನಾಥ್, ಶಿವನಳ್ಳಿ ರಮೇಶ್, ಸುರೇಶ್ ಸೇರಿದಂತೆ ಇನ್ನೂ ಅನೇಕರು ನಮ್ಮ ಮನೆಯಲ್ಲಿ ಊಟ ಮಾಡಿದ್ದರೆಂದು ಬೆಣ್ಣೆಹಳ್ಳಿ ಹಾಲೇಶಪ್ಪ ನೆನಪಿಸಿಕೊಂಡರು.