ಜಗಳೂರು : `ತಪಸ್ಸು ಯಶಸ್ಸು ಗ್ರಂಥಾಲಯ’ ಕಟ್ಟಡದ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ. ದೇವೇಂದ್ರಪ್ಪ
ಜಗಳೂರು, ಡಿ. 8- ನೂತನ ಗ್ರಂಥಾಲಯ ಕಟ್ಟಡಕ್ಕೆ 5 ಲಕ್ಷ ರೂಗಳ ಅನುದಾನ ನೀಡುವೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ತಮಲೇಹಳ್ಳಿ ನೌಕರರ ಸಂಘದ ಆಶ್ರಯ ದಲ್ಲಿ ನಡೆದ `ತಪಸ್ಸು ಯಶಸ್ಸು ಗ್ರಂಥಾ ಲಯ’ ಕಟ್ಟಡದ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಗ್ರಂಥಾಲಯ ಆರಂಭವಾಗಿ ಪ್ರಥಮ ವರ್ಷ ಪೂರೈಸಿದ್ದು, ಗ್ರಾಮದ ದೇವಸ್ಥಾನದ ಹತ್ತಿರ ಸುಸಜ್ಜಿತವಾದ ಸರಸ್ವತಿ ಕಟ್ಟಡ ಆಗುತ್ತಿದೆ. ಬಹಳ ಸಂತೋಷದ ಪುಣ್ಯದ ಕೆಲಸವಾಗಿದೆ ಎಂದು ತಿಳಿಸಿದರು.
ಗ್ರಾಮದವರಾದ ಪೊಲೀಸ್ ಅಧಿಕಾರಿ ಶಿವಕುಮಾರ್ ಸಾಹಿತ್ಯಾ ಸಕ್ತರೂ ಆಗಿದ್ದು ಗ್ರಾಮದಲ್ಲಿ ಟ್ರಸ್ಟ್ ವತಿಯಿಂದ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದರು. ವಿದ್ಯಾರ್ಥಿಗಳು ಪುಸ್ತಕವನ್ನು ಹಿಡಿದುಕೊಂಡು ನೀವು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಉನ್ನತ
ಮಟ್ಟಕ್ಕೆ ಹೋಗುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು. ಈ ಗ್ರಾಮಕ್ಕೆ ಹೊಸ ಗಾಳಿ ಬೀಸುತ್ತಿದೆ. ಸರಸ್ವತಿ ದೇವಸ್ಥಾನಕ್ಕೆ ಒಂದು ಅಡಿಗಲ್ಲು ಹಾಕಲಾಗಿದೆ. ಇದೊಂದು ಒಳ್ಳೆಯ ದೇವಸ್ಥಾನದಂತೆ ಆಗುತ್ತದೆ ಗ್ರಂಥಾಲಯ ಅನ್ನುವುದಕ್ಕಿಂತ ಸರಸ್ವತಿ ದೇವಾಲಯ ಅನ್ನಬೇಕಾಗುತ್ತದೆ. ನಾನೂ ಸಹ ಶಾಸಕ ಆದ ಸಂದರ್ಭದಲ್ಲಿ ಈ ಗ್ರಾಮಕ್ಕೆ ಅನುದಾನ ನೀಡಿ ಗ್ರಾಮ ಅಭಿವೃದ್ಧಿಪಡಿಸಿ ದ್ದೇನೆ ಎಂದು ತಿಳಿಸಿದ ಅವರು, ಈ ಗ್ರಂಥಾಲಯಕ್ಕೆ ನನ್ನ ವೈಯಕ್ತಿಕ ಒಂದು ಲಕ್ಷ ಹಣವನ್ನು ಕೊಡುತ್ತೇನೆ ಎಂದು ತಿಳಿಸಿದರು.
ರಾಯಚೂರು ಜಿಲ್ಲಾ ಎಎಸ್ಪಿ ಶಿವಕುಮಾರ್ ಮಾತನಾಡಿ, ಶಿಕ್ಷಣ ದಿಂದ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ.ಗ್ರಾಮದ ಮಕ್ಕಳು ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರು.
ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಡಾ.ಪ್ರಕಾಶ್, ತಿಮ್ಮಣ್ಣ, ಹನುಮಂತಪ್ಪ, ರಮೇಶ್ ಶ್ರೀನಿವಾಸ್ ಮುಂತಾದದವರು ಇದ್ದರು.