ವಿಶ್ವ ಮಧ್ವ ಮಹಾಪರಿಷತ್ತಿನ ದಾವಣಗೆರೆ ಕೇಂದ್ರದ ರಜತ ಮಹೋತ್ಸವ ಅಂಗವಾಗಿ ಪಂಡಿತ ವಿದ್ಯಾಧೀಶ ಆಚಾರ್ಯ ಗುತ್ತಲ ಅವರಿಂದ ಮಹಾಭಾರತ ಪ್ರವಚನ ಕಾರ್ಯಕ್ರಮ ಇಂದಿನಿಂದ ಮೂರು ದಿನ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ. ಇಂದು ಸಂಜೆ 6 ರಿಂದ 7.30 ರ ವರೆಗೆ ಪ್ರವಚನ ನಡೆಯಲಿದೆ. ರಾತ್ರಿ 7.30 ಕ್ಕೆ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಳೆ ಭಾನುವಾರ ಬೆಳಗ್ಗೆ 9 ರಿಂದ ಮನ್ಯುಸೂಕ್ತ ಮತ್ತು ವೇದವ್ಯಾಸ ಮಂತ್ರದ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11 ರಿಂದ 12.30 ರ ವರೆಗೆ ಪ್ರವಚನದ ಮಂಗಳ ಇರುತ್ತದೆ.
January 23, 2025