ತಂತ್ರಜ್ಞಾನಕ್ಕೆ ತಕ್ಕಂತೆ ತ್ವರಿತ ಚಿಂತನೆಗಳ ಅಗತ್ಯವಿದೆ : ಡಾ. ಸುಧೀರ್ ಕಾಮತ್

ತಂತ್ರಜ್ಞಾನಕ್ಕೆ ತಕ್ಕಂತೆ ತ್ವರಿತ ಚಿಂತನೆಗಳ ಅಗತ್ಯವಿದೆ : ಡಾ. ಸುಧೀರ್ ಕಾಮತ್

ದಾವಣಗೆರೆ, ಡಿ.8-  ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಮತ್ತು ತಾಂತ್ರಿಕ ಸಮುದಾಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಇಗ್ನಿಟ್ರಾನ್ 2k24 ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಮನ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಇಂಡಸ್ಟ್ರಿ ಅಕಾಡೆಮಿಯ ಡಿಆರ್ ಡಿ ಒ ಡಾ. ಸುಧೀರ್ ಕಾಮತ್ ಮಾತನಾಡಿ, ವೇಗವಾಗಿ ಚಲಿಸುವ ಜಗತ್ತು. ತಂತ್ರಜ್ಞಾನಗಳು ವೇಗವಾಗಿ ಮುಂದುವರಿಯುತ್ತಿವೆ. ಹಾಗಾಗಿ ಪ್ರಸ್ತುತ ಜಗತ್ತಿನಲ್ಲಿ ತುಂಬಾ ತ್ವರಿತವಾದ ಚಿಂತನೆಗಳ ಪ್ರಕ್ರಿಯೆ ಅಗತ್ಯವಿದೆ ಎಂದು ತಿಳಿಸಿದರು.

ಜಿಎಂ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಹೆಚ್.ಡಿ. ಮಹೇಶಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು. ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ಜಿಎಂ ಗ್ರೂಪ್ ನ ಸಲಹೆಗಾರರಾದ ಡಾ. ಕೆ. ದಿವ್ಯಾನಂದ, ರಫೀಕ್ ರಾಜ್, ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಕುಲಸಚಿವರಾದ ಡಾ. ಬಿ.ಎಸ್. ಸುನಿಲ್ ಕುಮಾರ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ಉಪ ನಿರ್ದೇಶಕರಾದ ಎಸ್.ಟಿ. ಮಾರುತಿ ಸೇರಿದಂತೆ ಪ್ರಾಂಶುಪಾಲರು, ಡೀನ್ ಗಳು, ನಿರ್ದೇಶಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಬಿ. ಸ್ಫೂರ್ತಿ ನಿರೂಪಿಸಿದರು. ವಿದ್ಯಾರ್ಥಿನಿ ಎಸ್. ಮೋನಿಕಾ ಸ್ವಾಗತಿಸಿದರು. ವಿದ್ಯಾರ್ಥಿನಿ ಎಂ. ಶ್ರೀಲಕ್ಷ್ಮಿ ವಂದಿಸಿದರು.

ಸತತ 24 ಗಂಟೆಗಳ ಕಾಲ ನಡೆದ “ಹ್ಯಾಕಥಾನ್” ನಲ್ಲಿನ ಎರಡು ವಿಷಯಗಳಲ್ಲಿ ಒಟ್ಟು 42 ತಂಡಗಳು, 168 ಸ್ಪರ್ಧಿಗಳು ಭಾಗವಹಿಸಿದ್ದರು. 

error: Content is protected !!