ಸೊಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸರೋಜಮ್ಮ ಮಲ್ಲೇಶಪ್ಪ

ಸೊಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸರೋಜಮ್ಮ ಮಲ್ಲೇಶಪ್ಪ

ಜಗಳೂರು, ಡಿ. 5- ತಾಲ್ಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ  ಅಧ್ಯಕ್ಷರಾಗಿ  ಸರೋಜಮ್ಮ ಮಲ್ಲೇಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವ ಹಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಶಂಕರ್ ಘೋಷಿಸಿದರು‌. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಗ್ರಾ.ಪಂ. ಉಪಾಧ್ಯಕ್ಷೆ  ಚೌಡಮ್ಮ, ಸದಸ್ಯರಾದ ಸ್ವಾತಿ ತಿಪ್ಪೇಸ್ವಾಮಿ, ರಾಜಪ್ಪ, ತಿರುಮಲ, ತಿಂದಪ್ಪ, ಕಾಳಮ್ಮ, ಭಾಗ್ಯಮ್ಮ, ಪಾಪಣ್ಣ, ರೇಣುಕಮ್ಮ, ಗೋವಿಂದಪ್ಪ, ನಿರ್ಮಲ, ಹನುಮಂತಪ್ಪ, ಶೈಲಾಕ್ಷಿ, ಮಂಜಪ್ಪ, ಆಶಾ, ಮುರಿಗೆಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!