ದಾವಣಗೆರೆ, ಡಿ. 3- ಬೆಂಗಳೂರು ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಕಳೆದ ವಾರ ನಡೆದ 14ನೇ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಎಂಬಿಎ ಹಾಗೂ ಬಿಕಾಂನಲ್ಲಿ ಡಿಸ್ಟಿಂಕ್ಷನ್ ಪಡೆದ ಕೆ. ಮಯೂರ್ ಹಾಗೂ ಬಿ.ಆರ್. ಅಖಿಲ್ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯ ಅಧ್ಯಕ್ಷ ರವಿಶಂಕರ್ ಹಾಗೂ ದಾವಣಗೆರೆ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಮಯೂರ್, ನಗರದ ಹಿರಿಯ ಪತ್ರಿಕಾ ವಿತರಕ ಎ.ಎನ್. ಕೃಷ್ಣಮೂರ್ತಿ ಅವರ ಪುತ್ರ ಹಾಗೂ ಬಿ.ಆರ್. ಅಖಿಲ್, ಬಿ.ಎಸ್. ರಮೇಶ್ ಬಾಬು ಅವರ ಪುತ್ರ.
ವಿದ್ಯಾರ್ಥಿಗಳು ದಿನಪತ್ರಿಕೆ ವಿತರಣೆ ಮಾಡುವುದರ ಜೊತೆಗೆ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಿದ್ದಾರೆ. ಇವರಿಗೆ ದಾವಣಗೆರೆ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಅಭಿನಂದಿಸಿರುತ್ತಾರೆ.