ಬಾವಿಗೆ ಬಿದ್ದಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ದಳ

ಬಾವಿಗೆ ಬಿದ್ದಿದ್ದ ಹಸು  ರಕ್ಷಿಸಿದ ಅಗ್ನಿಶಾಮಕ ದಳ

ದಾವಣಗೆರೆ, ಡಿ.3- ಇಲ್ಲಿನ ಆವರಗೆರೆಯ ಗುಂಡಿ ಮಹದೇವಪ್ಪ ಅವರ ಸಮಾಧಿ ತೋಟದಲ್ಲಿ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.

ಗುಂಡಿ ಪುಷ್ಪಾ ಸಿದ್ದೇಶ್‌ ಅವರಿಗೆ ಸೇರಿದ ಎಚ್‌ಎಫ್ ತಳಿಯ ಹಸು ತೋಟದಲ್ಲಿ ಹುಲ್ಲು ಮೇಯುತ್ತಿತ್ತು. ಬಾವಿಯ ಪಕ್ಕದಲ್ಲಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿತ್ತು. ಮೇಲೆ ಬರಲು ಸಾಧ್ಯವಾಗದೇ ಪರದಾಡುತ್ತಿದ್ದ ಹಸುವಿನ ಬಗ್ಗೆ ತೋಟದ ಕೆಲಸಗಾರರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ತೆರಳಿದ ಸಹಾಯಕ ಅಗ್ನಿಶಾಮಕ ಅಧಿಕಾರಿ ಭೀಮರಾವ್ ಉಪ್ಪಾರ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ ಹಸು ಮೇಲೆತ್ತುವ ಕಾರ್ಯಾಚರಣೆ ನಡೆಸಿದರು. ನೀರಿಗೆ ಇಳಿದು ಹಗ್ಗ ಕಟ್ಟಿ ಹಸುವನ್ನು ಮೇಲೆ ಎತ್ತುವಲ್ಲಿ ಯಶಸ್ವಿಯಾದರು.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಟಿ.ಸಿ.ನಾಗರಾಜ್, ಎಚ್‌.ಅಶೋಕ ನಾಯ್ಕ, ಜಿ.ಪ್ರಜ್ವಲ್, ಮಹಾಂತೇಶ್ ಮಲ್ಕಣ್ಣ ಪಾಲ್ಗೊಂಡಿದ್ದರು.

error: Content is protected !!