ಗೋವಿನಜೋಳ ಒಣಗಿಸುವ ಯಂತ್ರ ಅಳವಡಿಸಲು ವರ್ತಕರ ಮನವಿ

ಗೋವಿನಜೋಳ ಒಣಗಿಸುವ ಯಂತ್ರ ಅಳವಡಿಸಲು ವರ್ತಕರ ಮನವಿ

ರಾಣೇಬೆನ್ನೂರು,ಡಿ.1-  ಇಲ್ಲಿನ ಎಪಿಎಂಸಿಯಲ್ಲಿ ಗೋವಿನಜೋಳ ಒಣಗಿಸುವ ಯಂತ್ರ ಅಳವಡಿಸಿ ರೈತರಿಗೆ ಆಗುವ ತೊಂದರೆ ಹಾಗೂ ನಷ್ಟ ತಪ್ಪಿಸುವಂತೆ ವರ್ತಕರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.

ರೈತರು ತಮ್ಮ ಅನುಕೂಲದನ್ವಯ ಬೆಳೆ ಕೊಯಲ್ಲಿ ಮಾಡುತ್ತಲೇ ಮಾರಾಟಕ್ಕೆ ಮಾರುಕಟ್ಟೆಗೆ ತರುವುದು ವಾಡಿಕೆ. ಹಸಿ-ಬಿಸಿ ಮಾಲನ್ನು ತರುವ ರೈತರು ಮಾರುಕಟ್ಟೆ ಪ್ರಾಂಗಣದಲ್ಲಿ ಒಣಗಲು ಹಾಕಿದಾಗ ಆಕಸ್ಮಿಕ ಮಳೆಯಿಂದ ರೈತರ ಮಾಲು ಮತ್ತಷ್ಟು ಹಸಿಯಾಗಿ ದರದಲ್ಲಿ ಬಹಳಷ್ಟು ಇಳಿಮುಖವಾಗಿ ರೈತರಿಗೆ ಬಹಳಷ್ಟು ಅನ್ಯಾಯವಾಗಲಿದೆ ಎಂದು ಮನವಿಯಲ್ಲಿ ವರ್ತಕರು ಪ್ರಸ್ತಾಪಿಸಿದ್ದಾರೆ.

ಸರ್ಕಾರದಿಂದ ಇಲಾಖಾ ಕಛೇರಿಯಲ್ಲಿ ಒಣಗಿಸುವ ಯಂತ್ರ ಅಳವಡಿಸಿ ದರೆ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಮನವಿ ಅರ್ಪಿಸಿದ ವರ್ತಕರ ನಿಯೋಗದಲ್ಲಿ ಜಿ.ಜಿ.ಹೊಟ್ಟಿಗೌಡ್ರ, ಮಾಲತೇಶ ಕರೇಚಿಕ್ಕಪ್ಪನವರ, ವೀರೇಶ ಮೋಟಗಿ, ಮಾಲತೇಶ ಕರ್ಜಗಿ, ಕಿರಣ ಅಂತರವಳ್ಳಿ, ಗುರುರಾಜ ಕಂಬಳಿ, ಪ್ರಕಾಶ ಜಂಬಗಿ, ಸುಧೀರ ಕುರವತ್ತಿ ಮತ್ತಿತರರಿದ್ದರು.

error: Content is protected !!