ಪ್ರೇಮಾಲಯದಲ್ಲಿ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ

ಪ್ರೇಮಾಲಯದಲ್ಲಿ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ

ದಾವಣಗೆರೆ, ನ.25- ವಚನಾಮೃತ ಬಳಗ ಮತ್ತು ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ, ಜಿಲ್ಲಾ ಮಹಿಳಾ ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ, ಚನ್ನಬಸವಣ್ಣನವರ, ನೀಲಾಂಬಿಕೆ ಅವರ ಜಯಂತಿ  ಕಾರ್ಯಕ್ರಮವನ್ನು ವನಿತಾ ಸಮಾಜದ ಅಂಗ ಸಂಸ್ಥೆಯಾದ ಪ್ರೇಮಾಲಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಮ್ಯ ಸತೀಶ್ ಧಾರವಾಡ ಅವರು ವಚನಾಮೃತ ಬಳಗ ಮತ್ತು ಪುಟರಾಜ ಗವಾಯಿಗಳವರ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗ ಕಲಾವಿದ ಮಲ್ಲೇಶ್ ಮಕ್ಕಳಿಗೆ ಕನ್ನಡ ಭಾಷೆ ಇತಿಹಾಸ ಹಾಗೂ ಉಳಿಸಿ ಬೆಳೆಸಿಕೊಂಡು ಹೋಗುವ ಬಗ್ಗೆ ತಿಳಿಸಿದರು. ಬಳಗದ ಸದಸ್ಯರಾದ ಪೂರ್ಣಿಮಾ ಬಸವರಾಜ ಮಕ್ಕಳ ದಿನಾಚರಣೆ ಮತ್ತು ಕನ್ನಡ ಭಾಷಾಭಿಮಾನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.  

ಪ್ರೇಮಾಲಯದ ಮಕ್ಕಳಿಗೆ ವಚನ ಗಾಯನ ಕನ್ನಡ ಹಾಡುಗಳನ್ನು ಹೇಳಿಕೊಡಲಾಯಿತು. ಕೊನೆಯಲ್ಲಿ ಮಕ್ಕಳಿಗೆ ಸ್ಪರ್ಧೆಗಳನ್ನು ಪ್ರಧಾನ ಕಾರ್ಯದರ್ಶಿಯಾದ ಮಮತಾ ನಾಗರಾಜ್ ಮತ್ತು ಮಧುಮತಿ ಗಿರೀಶ್ ನಡೆಸಿಕೊಟ್ಟು ಮಕ್ಕಳಿಗೆ ಬಹುಮಾನ ವಿತರಿಸಿದರು. 

ಶಾಂತ ಶಿವಶಂಕರ್, ದೀಪಾ ಕಿರಣ್, ಲತಾ ಕಪಾಳಿ, ಮಧುಮತಿ ಗಿರೀಶ್, ಸುಜಾತಾ ಬಸವರಾಜ್ ಇವರುಗಳು ಭಾಗವಹಿಸಿದ ಮಕ್ಕಳಿಗೆ ವಚನ ಗಾಯನ ಹೇಳಿಕೊಟ್ಟರು. ಗಿರಿಜಾ ಬಿಲ್ಲಳ್ಳಿ, ಸಾವಿತ್ರಮ್ಮ, ವೃದ್ಧಾಶ್ರಮದ ತಾಯಂದಿರು ಮತ್ತು ಪ್ರೇಮಾಲಯದ  ಅಧ್ಯಕ್ಷೆ ಶೀಲಾ ನಲ್ಲೂರು ಮತ್ತು   ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!