ಮಹಿಳೆಯರು ಇನ್ನೂ ಸಬಲರಾಗಬೇಕು

ಮಹಿಳೆಯರು ಇನ್ನೂ ಸಬಲರಾಗಬೇಕು

ಎನ್‌ಎಫ್‌ಐಡಬ್ಲ್ಯು ಶಿಬಿರದಲ್ಲಿ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು

ದಾವಣಗೆರೆ, ನ.24- ಈಗಾಗಲೇ ಮಹಿಳೆಯರು ಸಬಲೀಕರಣದತ್ತ ದಾಪುಗಾಲು ಇಡುತ್ತಿದ್ದಾರೆ ಇದು ಸಾಲದು, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುವುದರ ಮೂಲಕ ಮತ್ತಷ್ಟು ಸಬಲರಾಗಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಹೇಳಿದರು.

ಇಲ್ಲಿನ ಕಾಂ. ಪಂಪಾಪತಿ ಭವನದಲ್ಲಿ ಎನ್‌.ಎಫ್‌.ಐ.ಡಬ್ಲ್ಯು. ಮಹಿಳಾ ಒಕ್ಕೂಟದ ಮಹಿಳೆಯರ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಇತ್ತೀಚೆಗೆ ಸಂಘ-ಸಂಸ್ಥೆಗಳಿಂದ ಮತ್ತು ಬ್ಯಾಂಕುಗಳಿಂದ ಸಾಲ ಸವಲತ್ತು ಪಡೆಯುವುದರ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ ಇದು ಸಾಲದು ಸಮಾಜದ ವಿವಿಧ ಸ್ತರಗಳ ಕ್ಷೇತ್ರಗಳಲ್ಲಿ ಮಹಿಳೆಯರು ಸರಿಸಮನಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.

ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್.ಜಿ. ಉಮೇಶ್, ಜಿಲ್ಲಾ ಖಜಾಂಚಿ ಮಹಮ್ಮದ್ ರಫೀಕ್, ಟ್ರಸ್ಟ್ ಸಹಕಾರ್ಯದರ್ಶಿ ಮಹಮ್ಮದ್ ಭಾಷಾ ಜಗಳೂರು, ಮುಖಂಡರಾದ ಜಿ. ಯಲ್ಲಪ್ಪ ಶಿಬಿರ ವನ್ನು ಉದ್ದೇಶಿಸಿ ಮಾತನಾಡಿ ಶುಭ ಕೋರಿದರು. 

ಉದ್ಘಾಟನಾ ಶಿಬಿರದ ಅಧ್ಯಕ್ಷತೆಯನ್ನು ಎನ್‌ಎಫ್‌ಐಡಬ್ಲ್ಯು ರಾಜ್ಯ ಸಮಿತಿ ಸದಸ್ಯರಾದ ಹೊನ್ನಾಳಿ ಚನ್ನಮ್ಮ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ಜಿಲ್ಲಾ ಖಜಾಂಚಿ ಸರೋಜಾ ಸೇರಿದಂತೆ ಇತರರು ಸಮಾರಂಭದ ವೇದಿಕೆಯಲ್ಲಿದ್ದರು.

ಎನ್‌ಎಫ್‌ಐಡಬ್ಲ್ಯು ರಾಜ್ಯ ಅಧ್ಯಕ್ಷೆ ಎ. ಜ್ಯೋತಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಮ್ಮ ಶಿಬಿರ ನಡೆಸಿಕೊಟ್ಟರು.ಇಪ್ಟಾ ಕಲಾವಿದರಾದ ಕೆ. ಬಾನಪ್ಪ, ಶ್ಯಾಗಲೆ ಶರಣಪ್ಪ, ಲೋಕಿಕೆರೆ ರುದ್ರೇಶ್ ಮಹಿಳೆಯರ ಕುರಿತು ಗೀತೆಗಳನ್ನು ಹಾಡಿದರು. ಎ.ಐ.ವೈ.ಎಫ್. ಮುಖಂಡರಾದ ಕೆರನಹಳ್ಳಿ ರಾಜು, ಎ. ತಿಪ್ಪೇಶ್, ದಾದಾಪೀರ್, ಸಿ. ರಮೇಶ್ ಸೇರಿದಂತೆ ಇತರರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಎನ್‌ಎಫ್‌ಐಡಬ್ಲ್ಯು ಮುಖಂಡರುಗಳಾದ ಹೊಸಳ್ಳಿ ಮಂಜುಳಾ, ಎಂ.ಆರ್. ಸುಮ, ಕೆ.ಸಿ. ನಿರ್ಮಲ, ಗೀತಾ, ಸುಶೀಲ, ವಿಜಯಕುಮಾರಿ, ಹೊನ್ನಾಳಿ ರೇಣುಕಮ್ಮ ಅಧ್ಯಯನ  ಶಿಬಿರ ಸಂಘಟಿಸಿದ್ದರು.

error: Content is protected !!