ಮನುಷ್ಯನಿಗೆ ಸಂಸ್ಕಾರ, ಶ್ರದ್ಧಾ – ಭಕ್ತಿ, ಆಚಾರ-ವಿಚಾರದ ಅವಶ್ಯಕ

ಮನುಷ್ಯನಿಗೆ ಸಂಸ್ಕಾರ, ಶ್ರದ್ಧಾ – ಭಕ್ತಿ, ಆಚಾರ-ವಿಚಾರದ ಅವಶ್ಯಕ

ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ನ.22- ಮನುಷ್ಯನಿಗೆ ಸಂಸ್ಕಾರ, ಆಚಾರ, ಧರ್ಮಕ್ಕೆ ಗುರುಬೇಕು. ನಾವು ಆರಾಧಿಸುವ ತಂದೆ-ತಾಯಿಯವರಿಗೆ ಪೂಜ್ಯ ಭಾವನೆಯ ಅವಶ್ಯಕತೆ ಇರುವುದು. ಇವೆಲ್ಲಾ ಮೌಲ್ಯಗಳನ್ನು ಸಂಪಾದನೆ ಮಾಡಿಕೊಂಡ ಮಾನವ ಜೀವನ ಪಾವನವಾಗಿ, ಉತ್ತಮ ಸ್ಥಿತಿಯ ಫಲವನ್ನು ಪಡೆದುಕೊಳ್ಳತ್ತಾನೆ ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕೆ.ಆರ್.ಮಾರುಕಟ್ಟೆಯಲ್ಲಿರುವ ಶ್ರೀ ಸಾಕ್ಷಿ ವರಸಿದ್ಧಿ ವಿನಾಯಕ ಸ್ವಾಮಿಯ 34ನೇ ವಾರ್ಷಿಕೋತ್ಸವ ಮತ್ತು ಕಾರ್ತಿಕೋತ್ಸವದ ಸಮಾರಂಭದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ವ್ಯಾಪಾರ ಕೇಂದ್ರ ಬಿಂದು ಮಾರುಕಟ್ಟೆಯಲ್ಲಿ ಶ್ರೀ ಸಾಕ್ಷಿ ವರಸಿದ್ಧಿ ವಿನಾಯಕ ಸ್ವಾಮಿಯ ಸತತ ವಾರ್ಷಿಕೋತ್ಸವ ನಡೆದುಕೊಂಡು ಬರುತ್ತಿರುವುದಕ್ಕೆ ಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದರು.

ದೈನಂದಿನ ಬದುಕಿನಲ್ಲಿ ವ್ಯಾಪಾರ-ವಹಿವಾಟು ಮಾಡುವುವರು, ಭಕ್ತರು ತಮ್ಮ ತನು, ಮನ-ಧನವನ್ನು ಶ್ರೀ ಸ್ವಾಮಿಗೆ ಅರ್ಪಿಸಿ ತಮಗೆಲ್ಲರಿಗೂ ಭಗವಂತನು ಉತ್ತಮ ಅಭಿವೃದ್ಧಿ ಅನುಗ್ರಹಿಸಿ, ಉತ್ತಮ ಆಯುಷ್ಯ, ಆರೋಗ್ಯ ನೀಡಲಿ ಎಂದು ಶ್ರೀಗಳು ಶುಭಾರ್ಶೀವಾದ ನೀಡಿದರು.

ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಸಾಕ್ಷಿ ವರಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ಐರಣಿ ಬಕ್ಕೇಶ, ಪದಾಧಿಕಾರಿಗಳಾದ ಆರ್.ಬಿ.ಹಿರೇಮಠ, ಡಿ.ಎಸ್.ನಾಗರಾಜ್, ರಾಜಣ್ಣ, ಹನುಮಂತಪ್ಪ, ಮಾಲತೇಶ, ಬಾಳೆಎಲೆ ರುದ್ರೇಶ್, ಸೊಪ್ಪಿನ ನಾಗರಾಜ ರೆಡ್ಡಿ, ಕರಿಬಸಪ್ಪ, ಮುರುಗೇಶ್, `ಜನತಾವಾಣಿ ಪ್ರತಿನಿಧಿ ಜಿ.ಎಸ್.ವಿರೂಪಾಕ್ಷಪ್ಪ, ಸಂಶಿ ಶಂಭುಲಿಂಗಪ್ಪ, ವಿಜಯಕುಮಾರ್,   ದೇವಸ್ಥಾನದ ಅರ್ಚಕರಾದ ವೀರಯ್ಯ ಸ್ವಾಮಿ, ವಿನಾಯಕ ಶಾಸ್ತ್ರಿ, ನಿರಂಜನ ಸ್ವಾಮಿ, ಅಪ್ಪು ಸ್ವಾಮಿ, ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. 

error: Content is protected !!