ವರ್ತುಲ ರಸ್ತೆ, ಎಸ್.ಎಸ್ ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಶ್ರೀ ಮಾತೋಶ್ರೀ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಇಂದಿನಿಂದ ಮೂರು ದಿನ 29ನೇ ಜ್ಞಾನಯಜ್ಞ ಸಪ್ತಾಹ ಮತ್ತು ಕಾರ್ತಿಕ ಮಹೋತ್ಸವ ಆಚರಿಸಲಾಗುವುದು.
ಇಂದು ಬೆಳಿಗ್ಗೆ ಶ್ರೀ ಗೌರವಮ್ಮಾಜಿಯವರ ಕರ್ತೃ ಗದ್ದುಗೆಗೆ ಮಹಾಭಿಷೇಕ, ಬೆಳಿಗ್ಗೆ 10 ಗಂಟೆಯಿಂದ ವೀಣಾ ಸ್ಥಾಪನೆಯೊಂದಿಗೆ ಸಪ್ತಾಹ ಪ್ರಾರಂಭವಾಗುತ್ತದೆ. ಸಂಜೆ 6 ಗಂಟೆಯಿಂದ ಮಾತೋಶ್ರೀಯವರ ನಾಮ ಸಂಕೀರ್ತನೆ, ಭಜನೆ ನೆರವೇರಿಸಲಾಗುವುದು.
ನಾಳೆ ಭಾನುವಾರ ಬೆಳಿಗ್ಗೆ 5 ಗಂಟೆಗೆ ಕಾಕಡಾರತಿ, 10 ಗಂಟೆಗೆ ಪೂಜೆ, ಗ್ರಂಥಪಠಣ, ಭಜನೆ ನಂತರ ಸಾಯಂಕಾಲ 4 ಗಂಟೆಯಿಂದ ಅಲಂಕೃತವಾದ ಪಾಲಕಿಯಲ್ಲಿ ಮಾತೋಶ್ರೀ ಗೌರಮ್ಮಾಜಿ ಭಾವಚಿತ್ರದ ಉತ್ಸವ ನಗರದ ರಾಜಬೀದಿಗಳಲ್ಲಿ ಸಂಚರಿಸಲಿದೆ. ರಾತ್ರಿ 10 ಗಂಟೆಗೆ ಕಾರ್ತಿಕ ದೀಪಗಳನ್ನು ಬೆಳಗಿಸುವುದು. ನಂತರ ಭಜನೆಯೊಂದಿಗೆ ಜಾಗರಣೆ ಆಚರಿಸಲಾಗುವುದು.
ನಾಡಿದ್ದು ದಿನಾಂಕ 25ರ ಸೋಮವಾರ ಬೆಳಿಗ್ಗೆ 5 ಗಂಟೆಗೆ ಕಾಕಡಾರತಿ, ಬೆಳಿಗ್ಗೆ 10 ಗಂಟೆಗೆ ಪೂಜೆ, ದಾಸಭೋದ ಗ್ರಂಥ ಪಠಣದ ನಂತರ ಪೂಜ್ಯರ `ಪುಣ್ಯ ಸ್ಮರಣೆ’ ಮಾಡುವುದು. ಮಧ್ಯಾಹ್ನ 12 ಗಂಟೆಗೆ ಪುಷ್ಪವೃಷ್ಟಿಗೈಯ್ಯುವುದು, ನಂತರ ಮಹಾ ಪ್ರಸಾದ ವ್ಯವಸ್ಥೆ ಇರುತ್ತದೆ.