ಮನುಕುಲಕ್ಕೆ ಅದ್ಭುತವಾದ ಚಿಂತನೆ, ತತ್ವಜ್ಞಾನ ನೀಡಿದ ಮಹಾನ್ ಸಂತ ಕನಕದಾಸರು

ಮನುಕುಲಕ್ಕೆ ಅದ್ಭುತವಾದ ಚಿಂತನೆ, ತತ್ವಜ್ಞಾನ ನೀಡಿದ ಮಹಾನ್ ಸಂತ ಕನಕದಾಸರು

ಹಳೆಪೇಟೆಯ ಶತಮಾನದ ಶಾಲೆಯಲ್ಲಿ ಕನಕದಾಸರ ಜಯಂತ್ಯೋತ್ಸವದಲ್ಲಿ ಎಂ.ಎನ್‌. ನಮಿತಾ

ದಾವಣಗೆರೆ, ನ.19- ನಗರದ ಹಳೆಪೇಟೆಯ ಶತಮಾನದ ಶಾಲೆಯಾದ ಉನ್ನತ್ತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾಜ ಸುಧಾರಕ, ಸಂತ ಕನಕದಾಸರ ಜಯಂತಿ ಆಚರಿಸಲಾಯಿತು.

ಶಿಕ್ಷಕಿ ನಮಿತಾ ಎಂ. ಎನ್. ಮಾತ ನಾಡಿ, ಮಹಾನ್ ಸಂತ ಕನಕದಾಸರು ಒಬ್ಬ ಕವಿ, ದಾರ್ಶನಿಕರಾಗಿ, ಸಮಾಜ ಸುಧಾರಕರಾಗಿ ಮಹಾನ್ ಚಿಂತಕರಾಗಿ ದ್ದರು. 15 ಮತ್ತು 16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿಪಂಥದ ಹರಿದಾಸರಲ್ಲಿ ಒಬ್ಬರಾಗಿದ್ದರು. 316 ಕೀರ್ತನೆಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ, ಹರಿಭಕ್ತಿಸಾರ, ರಾಮಧಾನ್ಯ ಚರಿತೆ ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರ ಜೀವನ ಸಂದೇಶ ಮನುಕುಲಕ್ಕೆ ಮಾರ್ಗದರ್ಶನ ಎಂದರು. 

ಹಿರಿಯ ಶಿಕ್ಷಕಿ ಆರ್. ಸಿ. ಅನು ಸೂಯ ಮಾತನಾಡಿ, ಸಂತ ಕನಕದಾಸರು ಕುರುಬ ಸಮುದಾಯದ ಭೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿಗೆ ಜನಿಸಿದ ಕನಕ ದಾಸರ ಮೂಲ ಹೆಸರು ತಿಮ್ಮಪ್ಪನಾಯಕ, ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಕನಕದಾಸರ ಇಷ್ಟ ದೇವರು ಶ್ರೀ ಆದಿಕೇಶವ. ಆದ್ದರಿಂದ ತಮ್ಮ ಜನ್ಮಸ್ಥಳವಾದ ಹಾವೇರಿ ಜಿಲ್ಲೆಯ ಬಾಡಕ್ಕೆ ಸಮೀಪದ ಕಾಗಿನೆಲೆಯಲ್ಲಿ ಆದಿಕೇಶವನ ದೇವಾಲಯವನ್ನು ನಿರ್ಮಿಸಿದರು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಒಕ್ಕೂಟ (ಎಸ್.ಡಿ.ಎಂ.ಸಿ) ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ. ದಾಸರ್, ಮುಖ್ಯೋಪಾಧ್ಯಾಯ ಲೋಕಣ್ಣ ಮಾಗೋಡ್ರ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೋಡುಬಳೆ ಚನ್ನಬಸಪ್ಪ, ಶಿಕ್ಷಕಿಯರಾದ ಜಯಶ್ರೀ, ಶಿಲ್ಪಾ, ರೂಪಾ, ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಗಾನವಿ ಕನಕದಾಸರ ಕೀರ್ತನೆಯನ್ನು ಹಾಡಿದಳು. ಕ್ಷಕಿ ರೂಪಾ ವಂದಿಸಿದರು.

error: Content is protected !!