ಮಲೇಬೆನ್ನೂರು, ನ.19- ದೇವರಬೆಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆದಾಪುರ ಗ್ರಾಮದಲ್ಲಿ ಶಂಕಿತ ಇಲಿ ಜ್ವರ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಹರಿಹರ ತಾ|| ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್ ಹಾಗೂ ತಾ|| ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಡಾ|| ಖಾದರ್, ಜಮೀನುಗಳ ಅಕ್ಕ-ಪಕ್ಕದಲ್ಲಿ ವಾಸಿಸುವ ಜನರು ಇಲಿಗಳಿಂದ ಆಹಾರ ಪದಾರ್ಥಗಳನ್ನು ಹಾಗೂ ತರಕಾರಿಗಳನ್ನು ಸಂರಕ್ಷಿಸಬೇಕು. ತರಕಾರಿ ಹಾಗೂ ಆಹಾರ ಪದಾರ್ಥಗಳ ಮೇಲೆ ಇಲಿ ಮೂತ್ರ ಮಾಡುವುದರಿಂದ ಅದರಲ್ಲಿನ ಬ್ಯಾಕ್ಟೀರಿಯಾಗಳು ಮನುಷ್ಯರ ದೇಹ ಪ್ರವೇಶಿಸಿ ಜ್ವರ ಬರುವ ಸಂಭವವಿರುತ್ತದೆ. ತರಕಾರಿಗಳನ್ನು ಮುಚ್ಚಿಟ್ಟು ಬಳಸುವಾಗ ತೊಳೆದು ನಂತರ ಉಪಯೋಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಪರಶುರಾಮ್, ಸವಿತಮ್ಮ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.