ಖಾತ್ರಿ ; ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ : ಸಿಇಒ ಹಿಟ್ನಾಳ್

ಖಾತ್ರಿ ; ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ : ಸಿಇಒ ಹಿಟ್ನಾಳ್

ಜಗಳೂರು, ನ.14- ತಾಲ್ಲೂಕಿನ 22 ಗ್ರಾಮಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ 1376 ವೈಯಕ್ತಿಕ ಹಾಗೂ 813 ಸಮುದಾಯ ಕಾಮಗಾರಿಗಳು ಒಳಗೊಂಡಂತೆ  ಒಟ್ಟು 2189 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿ.ಪಂ.ಸಿಇಓ ಸುರೇಶ್ ಹಿಟ್ನಾಳ್ ಮಾಹಿತಿ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಯೋಜನೆ ಹಾಗೂ ಗ್ರಾ.ಪಂ ಗಳಲ್ಲಿನ ಮೂಲಸೌಕರ್ಯ ಸಮಸ್ಯೆಗಳನ್ನು  ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮನರೇಗಾದಡಿ ವಾರ್ಷಿಕವಾಗಿ 35ಲಕ್ಷ ಮಾನವ ದಿನಗಳ ಗುರಿ ಇದ್ದು, ಅದರಲ್ಲಿ 15.21 ಲಕ್ಷ ಮಾನವ ದಿನಗಳು ಪೂರ್ಣಗೊಂಡಿವೆ‌. ಜಗಳೂರು ತಾಲ್ಲೂಕಿನಲ್ಲಿ 9.36 ಲಕ್ಷ ಮಾನವ ದಿನಗಳಲ್ಲಿ 5.16ಲಕ್ಷ ಪೂರ್ಣಗೊಂಡಿವೆ. ಹಿಂಗಾರು ಮಳೆ ಹೆಚ್ಚು ಬಂದ  ಹಿನ್ನೆಲೆಯಲ್ಲಿ ಕೆರೆಕಟ್ಟೆಗಳು ಭರ್ತಿಯಾಗಿದ್ದು. ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಕೂಲಿಕಾರ್ಮಿಕರ ಗುಳೇ ತಪ್ಪಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ತೆರಿಗೆ ವಸೂಲಾತಿ ಅಭಿಯಾನ ನಡೆಸಲಾಗುತ್ತಿದ್ದು‌. ಒಂದೇ ದಿನಕ್ಕೆ 1.67ಕೋಟಿ ತೆರಿಗೆ ಹಣ ವಸೂಲಾಗಿದೆ ತಾಲ್ಲೂಕಿನಲ್ಲಿ 1.5 ಲಕ್ಷ ಹಣ ಸಂಗ್ರಹವಾಗಿದೆ  ಎಂದರು.

ಜಗಳೂರು ಗೊಲ್ಲರಹಟ್ಟಿಗೆ ಭೇಟಿ: ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಜಗಳೂರು ಗೊಲ್ಲರಹಟ್ಟಿಗೆ ಭೇಟಿ ನೀಡಿ ಜೆಜೆಎಂ ನಳ ಕಾಮಗಾರಿ ವೀಕ್ಷಿಸಿ ಪೈಪ್ ಲೈನ್ ಅಳವಡಿಕೆ ವೇಳೆ ಅಗೆದಿರುವ ಸಿಸಿ ರಸ್ತೆ ದುರಸ್ತಿಗೆ ಗುತ್ತಿಗೆದಾರಗೆ ಸೂಚನೆ ನೀಡಿದರು. ನಂತರ ಭೋವಿಕಾಲೋನಿಯಲ್ಲಿ 15 ನೇ ಹಣಕಾಸು ಯೋಜನೆಯಡಿ    ಸಮರ್ಪಕ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲು ಹಾಗೂ ಕೂಡಲೇ ಚರಂಡಿ ಸ್ವಚ್ಛತೆಗೊಳಿಸಲು ಪಿಡಿಓ  ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾ‌‌.ಪಂ.ಇಓ ಕೆಂಚಪ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ಉಲ್ಲಾ, ಪಿಡಿಓ ಕೊಟ್ರೇಶ್ ಗ್ರಾಮಸ್ಥರು ಇದ್ದರು.

error: Content is protected !!