ಕೊಟ್ಟೂರು, ನ.12- ವೀರ ವನಿತೆ ಒನಕೆ ಓಬವ್ವನ ಜಯಂತ್ಯೋತ್ಸವನ್ನು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರರಂದು ಆಚರಿಸಲಾಯಿತು.
ಪ.ಪಂ. ಪದಾಧಿಕಾರಿಗಳಾದ ಮುಖ್ಯ ಅಧಿಕಾರಿ ಎ. ನಸ್ರುಲ್ಲಾ ಹಾಗೂ ಅಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರಾದ ಸಿ. ಚೌಡಪ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿದ್ದಯ್ಯ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಂಜಿನಮ್ಮ ವಿರುಪಾಕ್ಷಪ್ಪ, ಸದಸ್ಯ ಕೆಂಗರಾಜ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರಾದ ಅನುಷಾ, ವಿಜಯ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.