ದಾವಣಗೆರೆ, ನ. 11- ಕ್ರೀಡೆಯಲ್ಲಿ ಗೆಲ್ಲುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ. ಇಂದು ಕ್ರೀಡೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತದೆ. ಮೊಬೈಲ್ ಬಳಕೆ ಹೆಚ್ಚಾಗಿ ದೈಹಿಕ ಸಾಮರ್ಥ್ಯವನ್ನು ಯುವ ಪೀಳಿಗೆ ಕಳೆದುಕೊಳ್ಳುತ್ತಿದೆ ಎಂದು ಹರಿಹರದ ಹಿರಿಯ ಕಬಡ್ಡಿ ಕ್ರೀಡಾಪಟು ನಿಜಗುಣ ಹೇಳಿದರು.
ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಐ.ಕ್ಯೂ.ಎ.ಸಿ. ಘಟಕ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಈಜುಕೊಳ ಹರಿಹರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ರೀಡೆಯಲ್ಲಿ ಭಾಗವಹಿಸಿದರೂ ದೈಹಿಕವಾಗಿ ಸದೃಢರಾಗುತ್ತಾರೆ. ಆದ್ದರಿಂದ ಇವತ್ತಿನ ಮಕ್ಕಳು ಕ್ರೀಡೆಯಾಡಲು ಮುಂದೆ ಬರಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪಾಂಶುಪಾಲ ಅಣ್ಣಯ್ಯ ಎಂ.ಡಿ. ವಹಿಸಿದ್ದರು. ಕಾಡಜ್ಜಿ ಶಿವಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಬಸವ ರಾಜ ವಿ. ದಮ್ಮಳ್ಳಿ, ಡಾ. ವೀರಪ್ಪ, ಡಾ. ಶಿವಶಂಕರ ರೆಡ್ಡಿ, ಜಾನ್ ಫರ್ನಾಂಡೀಸ್, ಡಾ. ರೇಖಾ, ಡಾ. ಚಂದ್ರಶೇಖರ್, ಸುನೀತ ಹೆಚ್. ಇ. ಮಂಜುನಾಥ ಸಜ್ಜನ್, ಕರುಣಾಕರ್ ಐ.ಕ್ಯೂ.ಎ.ಸಿ ಸಂಚಾಲಕ ಅಂಜಿನಪ್ಪ ಡಿ. ಭಾಗವಹಿಸಿದ್ದರು.