ರಾಜ್ಯ ಸರ್ಕಾರಿ ನೌಕರರ ಸಂಘದ ಹರಿಹರ ತಾ. ಘಟಕದ ಚುನಾವಣಾ ಫಲಿತಾಂಶ ಪ್ರಕಟ

ರಾಜ್ಯ ಸರ್ಕಾರಿ ನೌಕರರ ಸಂಘದ ಹರಿಹರ  ತಾ. ಘಟಕದ ಚುನಾವಣಾ ಫಲಿತಾಂಶ ಪ್ರಕಟ

ಹರಿಹರ, ಅ. 29 – ರಾಜ್ಯ ಸರ್ಕಾರಿ ನೌಕರರ ಸಂಘದ ಹರಿಹರ ತಾಲ್ಲೂಕು ಘಟಕದ 34 ನಿರ್ದೇಶಕರ ಸ್ಥಾನಗಳಲ್ಲಿ 17 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಉಳಿದ  8 ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆಸಲಾಯಿತು  ಎಂದು ಚುನಾವಣಾ ಅಧಿಕಾರಿ ಬಿ.ಬಿ. ರೇವಣ್ಣನಾಯ್ಕ್ ತಿಳಿಸಿದ್ದಾರೆ.

ಕಂದಾಯ ಇಲಾಖೆ ಕ್ಷೇತ್ರ ಸಿಬ್ಬಂದಿ ಕ್ಷೇತ್ರದಿಂದ ವಿಜಯ ಮಹಾಂತೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ ಕ್ಷೇತ್ರದಿಂದ ಟಿ.ವೈ. ಮಹಮ್ಮದ್‌ ರಫೀ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕ್ಷೇತ್ರದಿಂದ ಎಂ. ಉಮ್ಮಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಳಿದ ಸಿಬ್ಬಂದಿ ಕ್ಷೇತ್ರದಿಂದ ಬಿ. ಕಿರಣಕುಮಾರ್, ಬಿ. ಆದರ್ಶ, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಪಿ. ಶಿವಮೂರ್ತಿ,  ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಇಲಾಖೆಯಿಂದ ಜಿ.ಕೆ. ಕುಮಾರ ಹಾಗೂ ಸಂಪತ್ ಕುಮಾರ, ಸರ್ಕಾರಿ ಪದವಿ ಪೂರ್ವ, ಪದವಿ, ಪಾಲಿಟೆಕ್ನಿಕ್, ಐ.ಟಿ.ಟಿ. ಇಲಾಖೆಯಿಂದ ಆರ್. ದ್ರೋಣನಾಯ್ಕ ಹಾಗೂ ಫಯಾಜ್ ಅಹಮದ್, ಸರ್ಕಾರಿ ಪ್ರೌಢ ಶಾಲೆಗಳ ಕ್ಷೇತ್ರದಿಂದ ಪಿ.ಜೆ. ರಾಜಶೇಖರ ಹಾಗೂ ಪಿ. ನಾಗರಾಜ, ನ್ಯಾಯಾಂಗ ಇಲಾಖೆಯಿಂದ ಎಸ್. ಮಂಜುನಾಥ, ಸರ್ಕಾರಿ ಪ್ರಾಥಮಿಕ ಶಾಲೆಗಳ ಕ್ಷೇತ್ರದಿಂದ ಸಿ. ಪೀರ್ಯಾನಾಯ್ಕ, ಅಷ್ಫಾಕ್ ಅಹ್ಮದ್, ಎಂ. ಗಿರೀಶ್ ಹಾಗೂ ಕೆ. ಜ್ಯೋತಿಲಕ್ಷ್ಮಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ  ರೇವಣನಾಯ್ಕ ವಿವರಿಸಿದ್ದಾರೆ.

error: Content is protected !!