ಸಂತೇಬೆನ್ನೂರಿನ ಈಶ್ವರೀಯ ವಿವಿಯಲ್ಲಿ ಇಂಜಿನಿಯರ್‌ಗಳ ದಿನ

ಸಂತೇಬೆನ್ನೂರಿನ ಈಶ್ವರೀಯ  ವಿವಿಯಲ್ಲಿ ಇಂಜಿನಿಯರ್‌ಗಳ ದಿನ

ಚನ್ನಗಿರಿ, ಅ.27- ತಾಲ್ಲೂಕಿನ ಸಂತೇಬೆನ್ನೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಭಾನುವಾರ ಇಂಜಿನಿಯರ್‌ಗಳ ದಿನ ಆಚರಿಸಲಾಯಿತು.

ಇದೇ ವೇಳೆ ಸರ್.ಎಂ. ವಿಶ್ವೇಶ್ವರಯ್ಯ ಅವರ ಸಾಧನೆ, ಸೇವೆ ಹಾಗೂ ಕೊಡುಗೆ ಸ್ಮರಿಸಿ, ದೇಶದ ಸುಭದ್ರತೆಗಾಗಿ ಇಂದಿನ  ಇಂಜಿನಿಯರ್‌ಗಳು ಉತ್ತಮ ಸೇವೆ ನೀಡಲಿ ಎಂದು ಆಶಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಜಿನಿಯರ್‌ಗಳಾದ ಜಗದೀಶ್, ಮಹೇಶ್ವರಪ್ಪ, ಪೋಸ್ಟ್ ಮಾಸ್ಟರ್ ನಾಗೇಂದ್ರಪ್ಪ, ಹೊನ್ನಮ್ಮ ಮತ್ತಿತರರಿದ್ದರು. ಈಶ್ವರೀಯ ವಿವಿ ಕೇಂದ್ರದ ಸಂಚಾಲಕರಾದ ಬ್ರಹ್ಮಾಕುಮಾರಿ ಮಮತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

error: Content is protected !!