ಪೋದಾರ್ ಇಂಟರ್‌ನಾಷನಲ್‌ ಶಾಲೆಯಲ್ಲಿ ಬೆಳಕಿನ ಹಬ್ಬ

ಪೋದಾರ್ ಇಂಟರ್‌ನಾಷನಲ್‌ ಶಾಲೆಯಲ್ಲಿ ಬೆಳಕಿನ ಹಬ್ಬ

ದಾವಣಗೆರೆ, ಅ.27- ನಗರದ ಪೋದಾರ್ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಶನಿವಾರ ಬೆಳಕಿನ ಹಬ್ಬ ದೀಪಾವಳಿಯನ್ನು  ಆಚರಿಸಲಾಯಿತು.

ಈ ವೇಳೆ ಮುಖ್ಯ ಶಿಕ್ಷಕಿ ಮೊನಾಲಿಸ ಸಿಂಗ್ ಮಾತನಾಡಿ, ಕತ್ತಲೆಯ ಮೇಲೆ ಬೆಳಕಿನ ಶಕ್ತಿಗಳ ವಿಜಯವನ್ನು ಸಂಕೇತಿಸಲು ಬೆಳಕಿನ ಹಬ್ಬ ಆಚರಿಸಲಾಗುತ್ತದೆ. ಹಾಗೆಯೇ ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವ ವಿಶೇಷ ಹಬ್ಬವೇ ದೀಪಾವಳಿಯಾಗಿದೆ ಎಂದರು.

ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವ ಕತ್ತಲೆ ಹಾಗೂ ನಮ್ಮ ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ನಾವು ದೀಪ ಬೆಳಗುತ್ತೇವೆ ಎಂದು ಹೇಳಿದರು.

ಈ ವೇಳೆ ಪ್ರಾಚಾರ್ಯರಾದ ಫಲ್ಕುರಿ ರೇವತಿ, ಡಾ. ಕೆ.ಎಲ್.ಮೂರ್ತಿ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರಿದ್ದರು.

error: Content is protected !!