ಹೊನ್ನಾಳಿ, ಅ. 25 – ಮಹಿಳೆಯರಿಗೆ ಸದಾ ಸ್ಫೂರ್ತಿ ಹಾಗೂ ಪ್ರೇರಣೆಯಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡಿ ಗೆದ್ದ ವಿಜಯೋತ್ಸವ ಸಂಭ್ರಮಾಚರಣೆ ದಿನವನ್ನು ನಾವೆಲ್ಲರೂ ಆಚರಿಸುವುದೇ ಒಂದು ಸಂಭ್ರಮದ ದಿನವಾಗಿದೆ ಎಂದು ಉಪವಿಭಾಗಾಧಿಕಾರಿ ಅಭಿಷೇಕ್ ತಿಳಿಸಿದರು.
ಹೊನ್ನಾಳಿ ತಾಲ್ಲೂಕು ಆಡಳಿತದಿಂದ ನಿನ್ನೆ ನಡೆದ ಕಿತ್ತೂರು ಚನ್ನಮ್ಮ 200ನೇ ವಿಜಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಮಾತನಾಡಿ, ರಾಣಿ ಚನ್ನಮ್ಮನ ಗೆಲುವಿನ ಸಂಭ್ರಮದ ಸವಿನೆನಪಿಗಾಗಿ ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆಗೊಳಿಸುವ ಆದೇಶದ ಮೂಲಕ ಈ ದಿನವನ್ನು ಸ್ಮರಣೆಯ ದಿನವನ್ನಾಗಿಸುವುದರೊಂದಿಗೆ ಚನ್ನಮ್ಮನ ಸ್ವಾಭಿಮಾನಿ ಹಾಗೂ ದಿಟ್ಟತನದ ಹೋರಾಟಕ್ಕೆ ಗೌರವ ಸಲ್ಲಿಸಿದೆ ಎಂದರು.
ಪಂಚಮಸಾಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟ್ಟಣ ಶೆಟ್ಟಿ ಪರಮೇಶ್ ಮಾತನಾಡಿದರು. ಕಿತ್ತೂರು ಚನ್ನಮ್ಮ ಬಗ್ಗೆ ಪತ್ರಕರ್ತ ಗಿರೀಶ್ ನಾಡಿಗ್ ಇವರಿಂದ ಉಪನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪಟ್ಟರಾಜೇಗೌಡ, ಪಂಚಮಸಾಲಿ
ಯುವ ಘಟಕದ ಅಧ್ಯಕ್ಷ ಹಾಲೇಶ ರಾಂಪುರ, ಉಪಾಧ್ಯಕ್ಷ ಮೃತ್ಯುಂಜಯ ಪಾಟೀಲ್, ಚಂದ್ರಶೇಖರ, ಮಹಿಳಾ ಪದಾಧಿಕಾರಿಗಳಾದ ಶಿಲ್ಪಾ
ರಾಜುಗೌಡ, ಕವಿತಾ ಚನ್ನೇಶ್, ರೈತ ಮುಖಂಡರಾದ ಹಿರೇಮಠ ಬಸವರಾಜಪ್ಪ, ಅರಬಗಟ್ಟಿ ಬಸಪ್ಪ ಇನ್ನಿತರರಿದ್ದರು.