ದಾವಣಗೆರೆ, ಅ.28- ಜಿ. ಎಸ್. ಗೇಮ್ ಸ್ಪಾಟ್ (ಟರ್ಫ್ ಗ್ರೌಂಡ್) ನಲ್ಲಿ ಕರುನಾಡು ಫುಟ್ ಬಾಲ್ ಕ್ಲಬ್ ವತಿಯಿಂದ ಅಂಡರ್ 10 ಫುಟ್ಬಾಲ್ ಲೀಗ್ ಆಯೋಜಿಸಲಾಗಿತ್ತು. ವಿವಿಧ ಜಿಲ್ಲೆಗಳಿಂದ ಅನೇಕ ತಂಡಗಳು ಭಾಗವಹಿಸಿದ್ದವು. ಚಿಕ್ಕಮಗಳೂರು ಫುಟ್ಬಾಲ್ ಕ್ಲಬ್ ಮೊದಲನೇ ಸ್ಥಾನ, ಚಿತ್ರದುರ್ಗ ಫುಟ್ಬಾಲ್ ಕ್ಲಬ್ ಎರಡನೇ ಸ್ಥಾನವನ್ನು ಪಡೆದಿದವು.
ಗೇಮ್ ಸ್ಪಾಟ್ ಮಾಲೀಕರಾದ ಅರುಣ್ ಶಾಮನೂರು, ಕರುನಾಡು ಫುಟ್ಬಾಲ್ ಕ್ಲಬ್ ಕೋಚ್‌ಗಳಾದ ಅಹಮದ್, ತನ್ವೀರ್, ರಾಜ್ ಕಿರಣ್ ತಂಬೋಲಿ ಮತ್ತಿತರರು ಉಪಸ್ಥಿತರಿದ್ದರು.