ಹೆಚ್ಚು ಮಳೆ: ಎಚ್ಚರಿಕೆಯಿಂದ ಕೆಲಸ ಮಾಡಬೇಕು

ಹೆಚ್ಚು ಮಳೆ: ಎಚ್ಚರಿಕೆಯಿಂದ ಕೆಲಸ ಮಾಡಬೇಕು

ಜನ, ಜಾನುವಾರುಗಳಿಗೆ ತೊಂದರೆಯಾಗದಂತೆ ಕೆಲಸ ಮಾಡಲು ಶಾಸಕ ಹರೀಶ್ ಸೂಚನೆ

ಪರಿಹಾರ ಮೊತ್ತ ಹೆಚ್ಚಿಸಲು ಹರೀಶ್ ಆಗ್ರಹ

ಸರ್ಕಾರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದರಿಂದ ಅನುದಾನವಿಲ್ಲದೆ ಅಭಿವೃದ್ಧಿ ಕಾರ್ಯಗಳೇ ಕನಸಾಗಿವೆ ಎಂದು ಶಾಸಕ ಹರೀಶ್ ಅಸಮಾಧಾನ ವ್ಯಕ್ತಪಡಿಸಿದರು. ಮಳೆಯಿಂದ ಹಾನಿ ಉಂಟಾದಾಗ ನೀಡಬೇಕಾದ ಪರಿಹಾರದ ಮೊತ್ತವನ್ನು  ಸರ್ಕಾರ ಹೆಚ್ಚಿಸಬೇಕು ಎಂದವರು ಆಗ್ರಹಿಸಿದರು.

ಹರಿಹರ, ಅ.23-  ತಾಲ್ಲೂಕಿನಲ್ಲಿ  ನಿರೀ ಕ್ಷೆಗೂ ಮೀರಿ ಮಳೆ ಆಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ತೊಂದರೆ ಆಗದಂತೆ ನೋಡಿ ಕೊಳ್ಳಿ ಎಂದು ವಿವಿಧ ಇಲಾಖೆಯ ಅಧಿಕಾರಿ ಗಳಿಗೆ ಶಾಸಕ ಬಿ.ಪಿ.ಹರೀಶ್ ಸೂಚಿಸಿದರು.

ನಗರದ ತಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಪ್ರಮುಖ ವೃತ್ತಗಳು, ಗ್ರಾಮಗಳ ರಸ್ತೆಗಳು, ಸೇತುವೆಗಳು ಹಾಳಗಿವೆ. ಅವುಗಳನ್ನು ತ್ವರಿತವಾಗಿ ದುರಸ್ತಿ ಪಡಿಸಲು ಲೋಕೋಪ ಯೋಗಿ ಪಂಚಾಯತ್ ರಾಜ್, ಲ್ಯಾಂಡ್ ಆರ್ಮಿ ಇಲಾಖೆಯ ಅಧಿಕಾ ರಿಗಳು ಮುಂದಾಗಬೇಕು ಎಂದರು.

ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಬೇಕು ಎಂದೂ ಸೂಚಿಸಿದ ಶಾಸಕರು, ತಾಲ್ಲೂಕಿನ ಬಿಳಸನೂರು ಆರೋಗ್ಯ ಕೇಂದ್ರದ ವೈದ್ಯರನ್ನು ಬೇರೆ ಕಡೆಗೆ ನಿಯೋಜಿಸಿ ಬೇರೆ ವೈದ್ಯರನ್ನು ನೇಮಕ ಮಾಡುವಂತೆ  ಹೇಳಿದರು.

ಗ್ರಾಮ ಠಾಣಾ ವಿಸ್ತರಣೆ ಆಗದೇ ಇರುವುದ ರಿಂದ ಜನತಾ ಮನೆಗಳಿಗೆ ಮತ್ತು ಆಶ್ರಯ ಬಡಾವಣೆಯಲ್ಲಿ ವಾಸಿಸುತ್ತಿರುವ ಬಹಳಷ್ಟು ಬಡ ವರಿಗೆ ತೊಂದರೆ ಆಗುತ್ತಿದ್ದು, ತಹಶೀಲ್ದಾರ್, ಇಓ, ವಿಎ, ಕಾರ್ಯದರ್ಶಿ, ಪಿಡಿಓ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮ ಸ್ಯೆಯನ್ನು ಪರಿಹರಿಸಲು ಮುಂದಾಗಬೇಕು. ಈ ಹಿನ್ನಲೆಯಲ್ಲಿ ಆದ್ದರಿಂದ ಮತ್ತೊಮ್ಮೆ ಶೀಘ್ರದಲ್ಲೇ ಸಭೆ ಕರೆುವಂತೆ ಕರೆಯುವಂತೆ ತಿಳಿಸಿದರು.

ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ಡಿ.ಆರ್.ಎಂ. ಶಾಲೆ ಶಿಥಿಲ ಕೊಠಡಿಯಲ್ಲಿ ಗುಣಮಟ್ಟದ ವಸ್ತುಗಳು ಇರುವುದರಿಂದ ಟೆಂಡರ್ ಪ್ರಕ್ರಿಯೆ ಮೂಲಕ ತೆರವುಗೊಳಿಸುವಂತೆ ಹೇಳಿದರು.

ಕೆಡಿಪಿ ನಾಮನಿರ್ದೇಶನ ಸದಸ್ಯ ಮಲ್ಲೇಶ್ ಕಮಲಾಪುರ ಮಾತನಾಡಿ, ತಾಲ್ಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಟ ಹೆಚ್ಚಾಗಿದ್ದು,  ಆಹಾರ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದರು.

ಕೃಷಿ ಇಲಾಖೆ ನಾರನಗೌಡ ಮಾತನಾಡಿ, ಹೆಚ್ಚಿನ ಮಳೆಯಿಂದಾಗಿ ಉಂಟಾಗುವ ನಷ್ಟವನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಿಇಓ ಡಿ. ದುರ್ಗಪ್ಪ ಮಾತನಾಡಿ, ಕಳೆದ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಜಿಲ್ಲೆಯಲ್ಲಿ ಕೊನೆಯ ಸ್ಥಾನಕ್ಕೆ ಬಂದಿದ್ದರಿಂದ ಈ ಬಾರಿ ವಿದ್ಯಾರ್ಥಿಗಳಿಗೆ ಸಾಕಷ್ಟು ತರಗತಿಯ ವ್ಯವಸ್ಥೆ ಮೂಲಕ ಫಲಿತಾಂಶ ಹೆಚ್ಚು ಬರುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೋವಿನಾಳ ರಾಜಣ್ಣ, ಬಿಳಸನೂರು ನರೇಂದ್ರ,  ಶಿಲ್ಪಾ ಕುಬೇರಪ್ಪ, ಜಬಿಉಲ್ಲಾ, ಕೊಟ್ರೇಶ್ ನಾಯ್ಕ್, ಅಧಿಕಾರಿ ಗಳಾದ ತಹಶೀಲ್ದಾರ್ ಗುರುಬಸವರಾಜ್, ತಾ.ಪಂ. ಇಓ ಸುಮಲತಾ, ನಾರನಗೌಡ, ಸಿದ್ದೇಶ್, ಪೂರ್ಣಿಮಾ, ಡಿ‌. ದುರ್ಗಪ್ಪ, ರಾಮಕೃಷ್ಣಪ್ಪ, ಶಶಿಧರಯ್ಯ, ಮಾರ್ಕಂಡೇಯ, ಹನುಮನಾಯ್ಕ್, ಶಶಿಕುಮಾರ್, ಕವಿತಾ, ಅಬ್ದುಲ್ ಖಾದರ್, ಅಮೃತ, ಮಂಜುನಾಥ್, ಕವಿತಾ, ಹನುಮಂತಪ್ಪ, ತಾಪಂ ಲಿಂಗರಾಜ್, ಕರಿಬಸಪ್ಪ, ಉಮೇಶ್ ಇತರರು ಹಾಜರಿದ್ದರು.

error: Content is protected !!