ದಾವಣಗೆರೆ, ಅ.28- ನಗರದಲ್ಲಿನ 65 ವರ್ಷದ ವಿಶೇಷ ಚೇತನ ವ್ಯಕ್ತಿಯ ದುಸ್ಥಿತಿ ಗಮನಿಸಿ ಜೀವನೋಪಾಯಕ್ಕಾಗಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ 18 ಸಾವಿರ ರೂ. ಮೌಲ್ಯದ ತಳ್ಳುವ ಅಂಗಡಿ ಕೊಡಿಸಿ, ಚಿಲ್ಲರೆ ವ್ಯಾಪಾರ ಮಾಡಲು ಮಾರ್ಗ ತೋರಿಸಿದ್ದಕ್ಕೆ ಫಲಾನುಭವಿ ಬಸವಲಿಂಗಪ್ಪ ಟ್ರಸ್ಟಿಗೆ ಕೃತಜ್ಞತೆ ತಿಳಿಸಿದ್ದಾರೆ. ಇಂತಹ ಸಮಾಜ ಸೇವೆ ಮಾಡಲು ಇಚ್ಛಿಸುವ ದಾನಿಗಳು ಕರುಣಾ ಜೀವ ಕಲ್ಯಾಣ ಟ್ರಸ್ಟಿನೊಂದಿಗೆ ಕೈ ಜೋಡಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
October 30, 2024