ದಲಿತ ಮುಖ್ಯಮಂತ್ರಿ ತಡೆಯಲು ಒಡೆದಾಳುವ ಷಡ್ಯಂತ್ರ; ಸರ್ದಾರ್ ಸೇವಾಲಾಲ್ ಶ್ರೀ ಆರೋಪ

ದಲಿತ ಮುಖ್ಯಮಂತ್ರಿ ತಡೆಯಲು ಒಡೆದಾಳುವ ಷಡ್ಯಂತ್ರ; ಸರ್ದಾರ್ ಸೇವಾಲಾಲ್ ಶ್ರೀ ಆರೋಪ

ರಾಣೇಬೆನ್ನೂರು, ಅ.20- ದಲಿತ ಮುಖ್ಯಮಂತ್ರಿ ಬೇಡಿಕೆ ಮುನ್ನೆಲೆಗೆ ಬರಬಹುದು ಎನ್ನುವ ಹೆದರಿಕೆಯಿಂದ ಕೆನೆಪದರ, ಒಳಪದರ ಮುಂತಾದವುಗಳಿಂದ ಒಂದಾಗಿರುವ ದಲಿತರನ್ನು ಒಡೆದಾಳುವ ಹುನ್ನಾರ ನಡೆಯುತ್ತಿದೆ. ಒಡಕಿಲ್ಲ ನಾವೆಲ್ಲರೂ ಒಂದಾಗಿದ್ದೇವೆ. ಜಲಜ ಷಡ್ಯಂತ್ರ ಗಳನ್ನು ಬಿಟ್ಟು  2020 ರ ಜನಗಣತಿ ಆದರಿಸಿ ಮೀಸಲಾತಿ ಕೊಡಿ. ತಪ್ಪಿದರೆ ನೀವೂ ಮನೆಗೋ ಗುವ ದಿನಗಳ ಬರಬಹುದು ಎನ್ನುವ ಎಚ್ಚರಿಕೆಯ ಮಾತುಗಳೊಂದಿಗೆ ಬಂಜಾರ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.

ಇಲ್ಲಿನ ವಿಕಾಸ ನಗರದ ಸಂತ ಸೇವಾಲಾಲ್ ಮಂದಿರದಲ್ಲಿ ನಿನ್ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿದರು.

ನಾವು ಕೊಲೆ, ಸುಲಿಗೆ ಮಾಡುವ ಜನರಲ್ಲ. ಸ್ವಾಭಿಮಾನದಿಂದ ದುಡಿದುಣ್ಣುವ ಜನರು. ನಮ್ಮದು ಬಹಳಷ್ಟು ಬಡವರಿರುವ ಸಮಾಜ. ಹೊಟ್ಟೆ ಪಾಡಿಗೆ ಆಂಧ್ರದ ಹೈದರಾಬಾದ, ಗೋವಾ, ನಾಡಿನ ವಿವಿಧೆಡೆ ಗುಳೆ ಹೋಗುವುದು ಈಗಲೂ ನಡೆದೇ ಇದೆ. ಮೈಸೂರು ಪ್ರಾಂತ ಹೊರತುಪಡಿಸಿ, ಉತ್ತರ ಕರ್ನಾಟಕದ ನಮ್ಮ ಜನರ ಪರಿಸ್ಥಿತಿ ಅರಿಯದೇ ಮೀಸಲಾತಿಯನ್ನು ನಿರ್ಧರಿಸುವ  ಕುಹಕತನದ ವಿರುದ್ದ ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಧರ್ಮಗುರುಗಳೆಲ್ಲ ಒಂದು ದಿನದ ಸಾಂಕೇತಿಕ ಧರಣಿ ನಡೆಸುವುದಾಗಿ ಶ್ರೀಗಳು ಎಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಜನರ ಪರ ಇರುವಂತವರು. ಅವರು ಹಿಂದುಳಿದವರಿಗೆ, ದಲಿತರಿಗೆ ಅನ್ಯಾಯ ಮಾಡಲಾರರು ಎನ್ನುವ ನಂಬುಗೆ ಈ ಸಮದಾಯಗಳ ಎಲ್ಲರ ಮನದಲ್ಲಿ ಮನೆಮಾಡಿದೆ. ಅದರಂತೆ ನಾವು ಸಹ ಆ ನಂಬಿಕೆಯಲ್ಲಿಯೇ ಬದುಕು ನಡೆಸಿದ್ದೇವೆ. ಕಾರಣ ಸಿದ್ದರಾಮಯ್ಯ ಅವರು ನಮಗೆ ಅನ್ಯಾಯ ಮಾಡದಂತೆ ಮೀಸಲಾತಿ ಜಾರಿಗೊಳಿಸಬೇಕು ಎಂದು ಸರ್ಧಾರ ಶ್ರೀಗಳು ಆಗ್ರಹಿಸಿದರು.

ಬಿಜೆಪಿಗರಿಗೆ ಆದ ಗತಿ ನಿಮಗೂ ಬರದಂತೆ ಎಚ್ಚರಿಕೆ ವಹಿಸಿ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಮಾತನಾಡಿದ ಬಂಜಾರ ಮುಖಂಡರಾದ ರಾಮಾನಾಯ್ಕ, ಚಂದ್ರ ನಾಯ್ಕ, ರಮೇಶ ಲಮಾಣಿ, ಬೀರೇಶ ಲಮಾಣಿ ಅವರು ಮೀಸಲಾತಿಯಲ್ಲಿ  ಬಂಜಾರ ಸಮಾಜಕ್ಕೆ ಅನ್ಯಾಯವಾದಲ್ಲಿ  ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಗಂಗಾಜಲ, ಬಸಲಿಕಟ್ಟಿ, ಮೆಡ್ಲೇರಿ, ಗುಡಗೂರು, ಹುಲ್ಲತ್ತಿ ಮುಂತಾದ 20 ತಾಂಡಾಗಳ ಮುಖಂಡರು ಹಾಜರಿದ್ದರು.

error: Content is protected !!