ದಾವಣಗೆರೆ, ಅ.13- ದಾವಣಗೆರೆ ದಕ್ಷಿಣ ವಲ ಯದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಸಹ ಶಿಕ್ಷಕಿ ಶ್ರೀಮತಿ ಮಂಜುಳಾ ಎಸ್. ಪಾಟೀಲ್ ಅವರು ಸೂರ್ಯ ಫೌಂಡೇ ಷನ್ ಹಾಗೂ ಸ್ಪಾರ್ಕ್ ಅಕಾಡೆಮಿ ವತಿ ಯಿಂದ ಬೆಂಗಳೂರಿನಲ್ಲಿ ಇದೇ ದಿನಾಂಕ 16 ರಂದು ಆಯೋ ಜಿಸಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಗುರು ಭೂಷಣ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಶಿಕ್ಷಣ ಕ್ಷೇತ್ರ, ಸಂಗೀತ, ನಾಟಕ, ನೃತ್ಯ, ಕ್ರೀಡೆ ಹೀಗೆ ವಿವಿಧ ಕಲೆಗ ಳಲ್ಲಿ ಪಾರಂಗತರಾಗಿರುವ ಮಂಜುಳಾ ಅವರು, ರಾಜ್ಯಮಟ್ಟ ದವರೆಗೂ ಪ್ರದರ್ಶನ ನೀಡಿದ್ದಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಶಾಲೆಯ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ.
ರಾಜ್ಯ ಪ್ರಶಸ್ತಿಗೆ ಮಂಜುಳಾ ಆಯ್ಕೆ
