ನಿವೇಶನ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಪುರಸಭೆ ಎದುರು ಧರಣಿ

ನಿವೇಶನ ಹಕ್ಕು ಪತ್ರ ನೀಡುವಂತೆ  ಆಗ್ರಹಿಸಿ ಪುರಸಭೆ ಎದುರು ಧರಣಿ

ಮಲೇಬೆನ್ನೂರು, ಅ.13- ಪಟ್ಟಣದ 11ನೇ ವಾರ್ಡ್‌ನಲ್ಲಿ ಭದ್ರಾ ಚಾನಲ್‌ ಪಕ್ಕದ ಸರ್ಕಾರಿ ಜಾಗದಲ್ಲಿ ಕಳೆದ 35 ವರ್ಷಗಳಿಂದ ವಾಸಿಸುತ್ತಿರುವ ನಮಗೆ ನಿವೇಶನ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಪುರಸಭೆ ಎದುರು ಬುಧವಾರ ಧರಣಿ ನಡೆಸಿದರು.

ಈ ಜಾಗದಲ್ಲಿ ಸರ್ಕಾರದಿಂದ ನೀರಿನ ಟ್ಯಾಂಕ್‌ ಕಟ್ಟಿದ್ದಾರೆ. ಅಲ್ಲದೆ ಅಲ್ಲಿ ದೇವಸ್ಥಾನವೂ ಇರುತ್ತದೆ. ನಾವು ಈ ಜಾಗದಲ್ಲಿ ವಾಸಿಸುತ್ತಿರುವ ಬಗ್ಗ ಐಡಿ ಕಾರ್ಡ್‌, ಆಧಾರ್‌ ಕಾರ್ಡ್‌ ಪಡೆದಿದ್ದೇವೆ. ಜೊತೆಗೆ ನಾವು ವಾಸಿಸುವ ಗುಡಿಸಲು ಮನೆಗಳಿಗೆ ಭಾಗ್ಯ ಜ್ಯೋತಿ ವಿದ್ಯುತ್‌ ಸಂಪರ್ಕವನ್ನೂ ನೀಡಿದ್ದಾರೆ.

ಇಷ್ಟೆಲ್ಲಾ ದಾಖಲೆಗಳಿದ್ದರೂ ಖಾಸಗಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ನಮಗೆ ಜಾಗ ಖಾಲಿ ಮಾಡುವಂತೆ ಒತ್ತಡ ಹಾಕುವುದು ಸರಿಯೇ? ಎಂದು ಧರಣಿ ನಿರತರು ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಧರಣಿ ನಿರತರದಿಂದ ಮನವಿ ಪತ್ರ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್‌ ಮಾತನಾಡಿ, ಈ ವಿಷಯವನ್ನು ಡಿಸಿ ಯವರ ಗಮನಕ್ಕೆ ತರುತ್ತೇನೆ ಎಂದರು.

ಧರಣಿಯಲ್ಲಿ ಪಾಲ್ಗೊಂಡಿದ್ದ ಕರಿಬಸಮ್ಮ, ಬಸಮ್ಮ, ನಾಗಮ್ಮ, ಲಕ್ಷ್ಮಣ, ದುಗ್ಗಮ್ಮ, ಭೋವಿ ಹನುಮಂತ, ವೆಂಕಟೇಶ್‌, ಗೋವಿಂದರಾಜ್‌, ಚಂದ್ರು, ದೇವೇಂದ್ರಪ್ಪ, ರಾಮ, ಗೋರಪ್ಪ ಸೇರಿದಂತೆ ಇನ್ನೂ ಅನೇಕರು ಮಾತನಾಡಿ, ನಾವು ಯಾವ ಕಾರಣಕ್ಕೂ ಅಲ್ಲಿಂದ ಜಾಗ ಖಾಲಿ ಮಾಡಲ್ಲ. ನಮಗೆ ನಿವೇಶನ ಹಕ್ಕು ಪತ್ರ ನೀಡಿ ಎಂದು ಆಗ್ರಹಿಸಿದರು.

error: Content is protected !!