ರಾಣೇಬೆನ್ನೂರಿನ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಪತ್ರಕರ್ತ ಕರಿಯಪ್ಪ ಅರಳೀಕಟ್ಟಿ
ರಾಣೇಬೆನ್ನೂರು, ಅ. 7 – ಪ್ರತಿದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳ ಬೇಕು, ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯ ಜೊತೆಗೆ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಯಾವ ಯಾವ ರೀತಿ ಯಿಂದ ಮಾಡುತ್ತಾರೆ ಮತ್ತು ಅವುಗಳಿಂದ ನಾವು ಹೇಗೆ ಜಾಗ್ರತರಾಗಿರಬೇಕು ಎಂಬ ಅರಿವು ಮೂಡುತ್ತದೆ ಎಂದು ಪತ್ರಕರ್ತರೂ ಆಗಿರುವ ರಾಣೇಬೆನ್ನೂರು ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕರಿಯಪ್ಪ ಅರಳೀಕಟ್ಟಿ ಹೇಳಿದರು.
ಅವರು ನಗರದ ಕರ್ನಾಟಕ ಸಂಘ ದಲ್ಲಿ ಸೋಮವಾರ 88ನೇ ವರ್ಷದ ನಾಡಹಬ್ಬದ ಐದನೆಯ ದಿನದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅತಿಥಿ ಯಾಗಿ ಆಗಮಿಸಿ ಮಾತನಾಡಿದರು.
ನಾಡು, ನುಡಿ ಸಂಸ್ಕೃತಿಯನ್ನು ಬಿಂಬಿಸುವಂತಹ ನಾಡಹಬ್ಬದ ಕಾರ್ಯ ಕ್ರಮಗಳು ಪ್ರತಿ ಗಲ್ಲಿಗಳಲ್ಲಿ ನಡೆಯಬೇಕು, ಪಾಲಕರು ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿ ಸುವ ಕೆಲಸ ಮಾಡ ಬೇಕು ಎಂದರು.
ಇನ್ನೋರ್ವ ಅತಿಥಿಯಾಗಿ ಆಗಮಿ ಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಣ್ಣ ಮೋಟಗಿ ಮಾತನಾಡಿ ದಸರಾ, ವಿಜಯ ದಶಮಿ, ನಾಡಹಬ್ಬ ಹೀಗೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಲ್ಲಿ ಹತ್ತು ದಿನಗಳ ಕಾಲ ಆಚರಿ ಸುವ ದೊಡ್ಡಹಬ್ಬ ಎಂದು ಹೇಳಿ ದಸರಾ ಆಚರಣೆ ಹಿನ್ನೆಲೆಗಳನ್ನು ವಿವರಿಸಿದರು.
ಮಾನವನಿಗೆ ಯಾವುದಾದರೊಂದು ಅಂಗ ಊನವಾಗಿದ್ದರೆ ಅವನಿಗೆ ವಿಶೇಷ ವಾದ ಇನ್ನೊಂದು ಶಕ್ತಿಯನ್ನೋ, ಕಲೆಯನ್ನೋ ದೇವರು ದಯಪಾಲಿಸಿ ರುತ್ತಾನೆ. ಅವರಲ್ಲಿನ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಲು ಸ್ನೇಹದೀಪ ದಂತಹ ಸಂಸ್ಥೆಗಳು ನೆರವಾಗುತ್ತಿವೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀಪಾದ ಕುಲಕರ್ಣಿ ಹೇಳಿದರು.
ಸ್ನೇಹದೀಪ ಅಂಧಮಕ್ಕಳ ಶಾಲೆಯ ವಿನಾಯಕ ಕೆಂಚನಗೌಡ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀನಿಧಿ ಶಿರಹಟ್ಟಿ ನಾಡಗೀತೆ ಹಾಡಿದರು, ಸಂಕಪ್ಪ ಮಾರನಾಳ ಸ್ವಾಗತಿಸಿದರು, ಮಹೇಶ ನಾಡಿಗೇರ ವಂದಿಸಿದರು, ಅಭಿನಂದನ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.