ಮಹಿಳೆಯರಿಂದ ಮಾತ್ರ ಪರಿಪೂರ್ಣ ಕೆಲಸ ಸಾಧ್ಯ

ಮಹಿಳೆಯರಿಂದ ಮಾತ್ರ ಪರಿಪೂರ್ಣ ಕೆಲಸ ಸಾಧ್ಯ

ರಾಣೇಬೆನ್ನೂರು : ರೈತ ಮುಖಂಡ ರವೀಂದ್ರಗೌಡ ಪಾಟೀಲ ಅಭಿಮತ

ರಾಣೇಬೆನ್ನೂರು, ಸೆ. 30- ಶೇಕಡ ನೂರಕ್ಕೆ ನೂರು ಪರಿಪೂರ್ಣ ಕೆಲಸಗಳು  ಮಹಿಳೆಯರಿಂದ ಮಾತ್ರ ಸಾಧ್ಯವಾಗಿದೆ. ಹಾಗಾಗಿ   ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈಗ ಮಹಿಳಾ ವಾಹನ ಚಾಲಕರು ಹಾಗೂ ಸಹಾಯಕರನ್ನು  ಸಹ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ರವೀಂದ್ರಗೌಡ ಪಾಟೀಲ ತಿಳಿಸಿದರು.  

ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ, ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾವೇರಿ, ತಾಲೂಕು ಪಂಚಾಯಿತಿ  ಹಾಗೂ ನೀಡ್ಸ್ ಸಂಸ್ಥೆ   ಸಹಯೋಗದಲ್ಲಿ ಇಲ್ಲಿನ  ಗುಪ್ತಾ ಸಭಾ ಭವನದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದ್ದ
ಮೂರು ದಿನಗಳ ಘನತ್ಯಾಜ್ಯ ನಿರ್ವಹಣೆ ಪುನಶ್ಚೇತನ  ಶಿಬಿರದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.

ನೀಡ್ಸ್ ಸಂಸ್ಥೆಯಿಂದ ಈ ತರಬೇತಿ ಮತ್ತು ಪ್ರಮಾಣ ಪತ್ರ ಪಡೆದ ಶಿಬಿರಾರ್ಥಿಗಳಿಗೆ ಸ್ವಚ್ಛ ಸಂಕೀರ್ಣದಲ್ಲಿ ಕೆಲಸ ದೊರೆಯಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದರು. 

ನೀಡ್ಸ್ ಸಂಸ್ಥೆ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಫ್. ಅಕ್ಕಿ ಮಾತನಾಡಿ, ತಾವು ಪಡೆದಂತಹ ತರಬೇತಿಗಳನ್ನು, ನಮ್ಮ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅನುಷ್ಠಾನಗೊಳಿಸಲು ಇದೊಂದು ಸದವಕಾಶವಾಗಿದೆ ಎಂದು ತಿಳಿಸಿದರು. 

ಮೂರು ದಿನಗಳ ತರಬೇತಿ ಕುರಿತು ಸಂಕ್ಷಿಪ್ತವಾಗಿ ಶಿಬಿರಾರ್ಥಿಗಳು ವಿಷಯವನ್ನು ಹಂಚಿಕೊಂಡರು. 

ನೀಡ್ಸ್ ಸಂಸ್ಥೆಯ ಸಿಬ್ಬಂದಿ  ಸುಧೀರ ಈಟಿ, ಅಬ್ದುಲ್ ಖಾದರ್ ಹಾಗೂ 10 ಪಂಚಾಯಿತಿಗಳಿಂದ ಒಟ್ಟು 30 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. 

ನೀಡ್ಸ್ ಸಂಸ್ಥೆ ಯೋಜನಾ ಸಹಾಯಕ   ಎಂ. ಕರಿಬಸಪ್ಪ  ಸ್ವಾಗತಿಸಿದರು. ತಿಪ್ಪೇಶಪ್ಪ ಕನ್ನಮ್ಮನವರು ನಿರೂಪಿಸಿ, ವಂದಿಸಿದರು.

error: Content is protected !!