ಭಕ್ತಿ – ಶ್ರದ್ಧೆ ಹೆಚ್ಚಾದಷ್ಟೂ ನಾಡು ಸಮೃದ್ಧಿ

ಭಕ್ತಿ – ಶ್ರದ್ಧೆ ಹೆಚ್ಚಾದಷ್ಟೂ ನಾಡು ಸಮೃದ್ಧಿ

ಹರಿಹರ: ಧರ್ಮ ಜಾಗೃತಿ,ಗುರುರಕ್ಷೆ  ಕಾರ್ಯಕ್ರಮದಲ್ಲಿ ಓಂಕಾರ ಶಿವಾಚಾರ್ಯ ಸ್ವಾಮೀಜಿ

ಹರಿಹರ, ಸೆ.30- ದೇವರ ಬಗ್ಗೆ ಭಕ್ತಿ, ಶ್ರದ್ಧೆ ಹೆಚ್ಚಾದಷ್ಟೂ ನಾಡು ಸಮೃದ್ಧಿಯಿಂದ ಇರುತ್ತದೆ. ಮನುಷ್ಯನ ಬದುಕು ಸುಸ್ಥಿರವಾಗಿ ಸಾಗುತ್ತದೆ ಎಂದು ಆವರಗೊಳ್ಳ ಶ್ರೀ  ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ನಗರದ ವಾಗೀಶ ಬಡಾವಣೆಯ ಶ್ರೀ ಮೂಗ ಬಸವೇಶ್ವರ ದೇವಸ್ಥಾನದಲ್ಲಿ ನಡೆದ 48 ದಿನದ ಮಂಡಲ ಪೂಜಾ ಸಮಾರೋಪ, ಧರ್ಮಜಾಗೃತಿ ಮತ್ತು ಗುರುರಕ್ಷೆ  ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ  ಶ್ರೀಗಳು ಆಶೀರ್ವಚನ ನೀಡಿದರು.

ದೇವರ ಪೂಜೆ ಹಾಗೂ ಆರಾಧನೆಯಿಂದ ಅಧ್ಯಾತ್ಮಿಕ ಒಲವು ಉಂಟಾಗುವುದರ ಜೊತೆಗೆ ಕಷ್ಟಗಳು ದೂರವಾಗುತ್ತವೆ. ಎಲ್ಲರೂ ಸಹಬಾಳ್ವೆ ಯಿಂದ ಇದ್ದಾಗ ಸಮಾಜದಲ್ಲಿ ಮುಂದಿನ ಪೀಳಿಗೆ ಸ್ಮರಿಸುವಂತಹ ಕಲ್ಯಾಣ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.

ವಿದೇಶದಲ್ಲಿ ಧರ್ಮದ ಆಚರಣೆಗಿಂತ ಹಣ ಸಂಪಾದನೆ ಹೆಚ್ಚು ಪ್ರಾಮುಖ್ಯತೆ ಇದೆ. ಆದರೆ ಭಾರತ ದೇಶದಲ್ಲಿ ಅಧ್ಯಾತ್ಮಿಕತೆಗೆ ಹೆಚ್ಚು ಒಲವನ್ನು ತೋರಿಸುವುದರಿಂದ ನಮ್ಮ ದೇಶ ಅಧ್ಯಾತ್ಮದ ನೆಲೆ ಬೀಡು ಆಗಿದೆ ಎಂದರು.

ಲೋಕದ ಉಪಕಾರಕ್ಕೆ ಹರಿಹರ ನಗರದಲ್ಲಿ ಮೂರ್ಕಲ್ ಮನೆತನದವರ ಕೊಡುಗೆ ಅಪಾರ. ಅವರು ಮಾಡಿದ ಧರ್ಮ ಹಾಗೂ ಪುಣ್ಯದ ಕೆಲಸದ ಇಂದಿಗೂ ಸಮಾಜದ ಜನರು ಸ್ಮರಿಸುತ್ತಾರೆ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮೂಗ ಬಸವೇಶ್ವರ ದೇವರ ಆಶೀರ್ವಾದದಿಂದ ನಾಡಿನಾದ್ಯಂತ ಮಳೆ, ಬೆಳೆಗಳು ಚೆನ್ನಾಗಿ ಆಗುವಂತಾಗಲಿ ಎಂದರಲ್ಲದೆ, ಪೋಷಕರು ಮನೆಯಲ್ಲಿ ಮಕ್ಕಳಿಗೆ ದೇವರು, ಧರ್ಮದ ಬಗ್ಗೆ ತಿಳಿಸುವಂತಹ ಕಾರ್ಯ ಆಗಬೇಕು ಎಂದರು.

ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಎ.  ಮುರುಗೇಶ್ ಆರಾಧ್ಯ ಮಾತನಾಡಿ, ಪೂರ್ವಜರು ನಡೆಸಿಕೊಂಡು ಬಂದಿರುವ ಹಿಂದಿನ ಧರ್ಮವೇ ಸನಾತನ ಧರ್ಮವಾಗಿದೆ. ಅನ್ಯ ಧರ್ಮದವರ ಆಚರಣೆ ವಿರೋಧ ಮಾಡುವುದಕ್ಕಿಂತ ನಮ್ಮ ಧರ್ಮವನ್ನು ಉಳಿಸಲು ಮುಂದಾಗಬೇಕು ಎಂದರು.

 ಈ ವೇಳೆ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಮೂರ್ಕಲ್ ಶಿವಶಂಕರ್,  ಆರ್.ಆರ್. ಕಾಂತರಾಜ್,  ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಉಪನ್ಯಾಸಕಿ, ಶ್ವೇತಾ ಈಶ್ವರ ಕತ್ತಲಗೇರಿ, ಸಮಾಳ ಚಂದ್ರಪ್ಪ, ಮಿಥುನ್ ಮೂರ್ಕಲ್, ಹೆಚ್. ಲಿಂಗೇಶ್, ಶಿಲ್ಪಿ ಅಣ್ಣಪ್ಪ ಆಚಾರ್, ಇಂದೂದರ ಸ್ವಾಮಿ, ಚಂದ್ರಮ್ಮ ಕರಿಬಸಪ್ಪ,  ಸುರೇಶ ಸಕ್ರಿ, ಟೈಲರ್ ಗಣೇಶ, ಕೊಂಡಜ್ಜಿ ರೇವಣಸಿದ್ದಪ್ಪ, ಮೂರ್ಕಲ್ ಜಯವಿಭವ, ಹಿಂದೂ ಮಹಾಗಣಪತಿ ಟ್ರಸ್ಟ್ ಅಧ್ಯಕ್ಷ ಬಸವನಗೌಡ, ಹಿಂದೂ ಜಾಗರಣ ವೇದಿಕೆಯ ದಿನೇಶ್ ಇತರರಿಗೆ ಗುರು ರಕ್ಷೆ ನೀಡಿ ಗೌರವಿಸಲಾಯಿತು.

ಹಿರೇಮಠ ಸ್ವಾಮೀಜಿ, ಮೂರ್ಕಲ್ ಮುರುಗೇಂದ್ರಪ್ಪ, ವೀರೇಂದ್ರ ಕೊಂಡಜ್ಜಿ, ವಿಜಯ್, ಬಸವರಾಜ್ ಕೊಂಡಜ್ಜಿ, ಜಗದೀಶ್ವರಯ್ಯ ಹಿರೇಮಠ,  ಜಿ.ಬಿ. ರಮೇಶ್  ದಾವಣಗೆರೆ, ಶಂಭುಲಿಂಗಪ್ಪ, ಜಿ.ಕೆ. ಮಲ್ಲಿಕಾರ್ಜುನ್, ಸುಂದರೇಶ್ ಇತರರು ಹಾಜರಿದ್ದರು.

error: Content is protected !!