ದಾವಣಗೆರೆ, ಸೆ. 30- ಆಂಜನೇಯ ಬಡಾವಣೆ ನಾಗರಿಕ ಹಿತ ರಕ್ಷಣಾ ಸಮಿತಿಯ 26ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಮಿತಿಯ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕುಸುಮಾ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಎಂ. ಗುರುಬಸವರಾಜ್, ಗೌರವ ಸಲಹೆಗಾರರಾದ ಎಸ್.ಬಿ. ರುದ್ರಗೌಡ, ಎಲ್.ಎಸ್. ಅಜಗಣ್ಣನವರ್, ಖಜಾಂಚಿ ಎಂ.ಹೆಚ್. ರಂಗಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಸುಶಿಲಾ ಗುರುಬಸವರಾಜ್ ಪ್ರಾರ್ಥಿಸಿದರು. ಗುರುಬಸವರಾಜ್ ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ಶ್ರೀಮತಿ ಮಮತಾ ನಾಗರಾಜ್ ವಾರ್ಷಿಕ ವರದಿ ಮಂಡಿಸಿದರು. ಎಂ.ಹೆಚ್. ರಂಗಪ್ಪ ವಾರ್ಷಿಕ ಆಯವ್ಯಯ ಮಂಡಿಸಿ, ಅನುಮೋದನೆ ಪಡೆದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಎಸ್.ಬಿ. ರುದ್ರಗೌಡ ನೆರವೇರಿಸಿದರು.
ನೂತನ ಅಧ್ಯಕ್ಷರಾಗಿ ನಾಗಪ್ಪ ತಳಕಲ್ ನೇಮಕಗೊಂಡರು. ನಿರ್ದೇಶಕರಾದ ಶ್ರೀಮತಿ ಸುಜಾತ ರವಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ನಿರ್ದೇಶಕ ಮಲ್ಲಿಕಾರ್ಜುನ ಚನ್ನಳ್ಳಿ ವಂದಿಸಿದರು. ರಂಗಪ್ಪ ಉಪಹಾರದ ಪ್ರಾಯೋಜಕರಾಗಿದ್ದರು.