ದಾವಣಗೆರೆ, ಸೆ. 30 – ಲಯನ್ಸ್ ಕ್ಲಬ್ ಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮ ದಿನಾಚರಣೆಯ ಅಂಗವಾಗಿ ಇಂಜೀನಿಯರ್‌ಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಬಿ.ಎಸ್. ನಾಗಪ್ರಕಾಶ್, ಪ್ರಾಂತೀಯ ಅಧ್ಯಕ್ಷ ವೈ.ಬಿ. ಸತೀಶ್ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ನಗರದ ಇಂಜಿನಿಯರ್‌ಗಳಾದ ಬಿ.ಹೆಚ್. ಶಿವಕುಮಾರ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಇಂಜಿನಿಯರ್ ದಿನೇಶ್ ಶೆಟ್ಟಿ, ಹೆಚ್.ವಿ.ಮಂಜುನಾಥ್ ಸ್ವಾಮಿ, ಎ.ಬಿ. ಪ್ರತಾಪ್, ಎಂ.ಎಸ್. ಉದಯ್ ಕುಮಾರ್, ಆರ್. ವೆಂಕಟರೆಡ್ಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಲಯನ್ಸ್ ಕಾರ್ಯದರ್ಶಿ ಅಜಯ್ ನಾರಾಯಣ್ ವಿಶ್ವೇಶ್ವರಯ್ಯ ನವರ ಬದುಕು ಮತ್ತು ಸಾಧನೆ ಎಂಬ ವಿಷಯವಾಗಿ ಉಪನ್ಯಾಸ ನೀಡಿ, ವಿಶ್ವೇಶ್ವರಯ್ಯ ನವರ ಬದುಕು ಇಂದಿನ ಪೀಳಿಗೆಗೆ ದಾರಿದೀಪ ಎಂದರು ಮತ್ತು ವಿಶ್ವೇಶ್ವರಯ್ಯ ನವರ ವೈಶಿಷ್ಟ್ಯಪೂರ್ಣ ಸಾಧನೆಯ ಮಜಲುಗಳನ್ನು ಕೊಂಡಾಡಿದರು.
ಹೆಚ್.ವಿ. ಮಂಜುನಾಥ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಎಸ್. ನಾಗರಾಜ್, ಸಹ ಕಾರ್ಯದರ್ಶಿ ಹೆಚ್.ಎಂ. ನಾಗರಾಜ್ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.