ದಾವಣಗೆರೆ, ಸೆ.30- ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪಂಚಮಸಾಲಿ ವಧು-ವರರ ಮಾಹಿತಿ ಕೇಂದ್ರದಿಂದ ನಗರದ ಸದ್ಯೋಜಾತ ಸ್ವಾಮಿ ಹಿರೇಮಠದಲ್ಲಿ ಇತ್ತೀಚೆಗೆ ಪಂಚಮಸಾಲಿ ವಧು-ವರರ ಸಮಾವೇಶ ನಡೆಯಿತು.
ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಸಮಾವೇಶ ಉದ್ಘಾಟಿಸಿದರು. ಸಮಾಜದ ಉಪಾಧ್ಯಕ್ಷೆ ವಾಣಿ ಶಿವಣ್ಣನವರು, ಬಸವರಾಜ್ ಅಣಪೂರ್, ಎಸ್.ಕೆ. ಶ್ರೀಧರ್, ವಧು-ವರರ ಮಾಹಿತಿ ಕೇಂದ್ರದ ಅಧ್ಯಕ್ಷ ಮಾಸೂರು ಮಹೇಶ್ವರಪ್ಪ, ಕಾರ್ಯದರ್ಶಿ ಶ್ರೀಧರ್ ಸಿ. ಸಣ್ಣಪ್ಪನವರ್, ಉಪಾಧ್ಯಕ್ಷ ಬಾದಾಮಿ ಕರಿಬಸಪ್ಪ, ಖಜಾಂಚಿ ಮಂಜುನಾಥ ಪುರವಂತರ, ಕೆ.ಕೆ. ನಾಗರಾಜ್, ಬಾದಾಮಿ ಜಯಣ್ಣ, ಚನ್ನ ಮಲ್ಲಿಕಾರ್ಜುನ್, ಎನ್.ಎಚ್. ಲಿಂಗರಾಜು, ಜಿ. ಷಣ್ಮುಖಪ್ಪ, ಎನ್. ಶಿವಾನಂದಪ್ಪ, ಕೆ.ಸಿ ಉಮಾಕಾಂತ್, ಬಾತಿ ರವಿಕುಮಾರ್ ಪೂಜಾರ್, ಎಂ. ದೊಡ್ಡಪ್ಪ, ಮಹಡಿ ತಿಪ್ಪೇಸ್ವಾಮಿ, ವೀಣಾ ನಟರಾಜ್ ಬೆಳ್ಳೂಡಿ, ಸಿ. ಪುಟ್ಟಪ್ಪ, ಕುಮಾರ್ ಹುಂಬಿ, ಪಂಚಮಸಾಲಿ ಸಮಾಜದ ಎಲ್ಲಾ ಘಟಕಗಳ ಸದಸ್ಯರಿದ್ದರು.