ಶ್ರೀ ರೇಣುಕಾಂಬ ಕ್ರೆಡಿಟ್‌ ಕೋ ಆಪ್ ಸೊಸೈಟಿ ರಜತೋತ್ಸವ

ಶ್ರೀ ರೇಣುಕಾಂಬ ಕ್ರೆಡಿಟ್‌ ಕೋ ಆಪ್ ಸೊಸೈಟಿ ರಜತೋತ್ಸವ

ದಾವಣಗೆರೆ, ಸೆ. 27- ನಗರದ ಶ್ರೀ ರೇಣುಕಾಂಬ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಹಾಗೂ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಪಿ.ಬಿ. ರಸ್ತೆ, ವಿನೋಬನಗರದ ಈಡಿಗ ಹಾಸ್ಟೆಲ್ ಕಾಂಪ್ಲೆಕ್ಸ್‌ನಲ್ಲಿ ಏರ್ಪಡಿಸಲಾಗಿತ್ತು.

ನಿರ್ದೇಶಕ ಹೆಚ್. ಶಂಕರ್ ಸೊಸೈಟಿಯ 25 ವರ್ಷಗಳ ಬೆಳವಣಿಗೆಯನ್ನು ಪ್ರಾಸ್ತಾವಿಕವಾಗಿ ತಿಳಿಸಿದರು.

ಎಸ್. ಭರಮಪ್ಪ ಮಹಾಸಭೆಯ ನಡಾವಳಿಯನ್ನು ಸಭೆಯಲ್ಲಿ ಮಂಡಿಸಿದರು.

ನಿರ್ದೇಶಕ ಈ. ದೇವೇಂದ್ರಪ್ಪ 2023-24ನೇ ಸಾಲಿನ ಲಾಭ ವಿಂಗಡಣೆ, ಅಂದಾಜು ಮುಂಗಡ ಪತ್ರ ವರದಿಗಳನ್ನು ಮಂಡಿಸಿ ಮಹಾಸಭೆಯ ಒಪ್ಪಿಗೆ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಸುಮಾ ಎಸ್.ಭರಮಪ್ಪ, ಸೊಸೈಟಿಯ ಆಡಳಿತ ಮಂಡಳಿಯ ಪರವಾಗಿ ಸೊಸೈಟಿ ಸರ್ವ ಸದಸ್ಯರುಗಳಿಗೂ ಹಾಗೂ ಮೆ.ಜೋಶಿ ಅಂಡ್ ಕಂಪನಿ ಚಾರ್ಟಡ್‌ ಅಕೌಂಟೆಂಟ್  ಹಾಗೂ ಮೆ.ಎಂ.ಎಸ್.ಎಸ್.ವಿ. ಮತ್ತು ಕಂಪನಿ ಚಾರ್ಟರ್ಡ್ ಅಕೌಂಟೆಂಟ್ ಬೆಂಗಳೂರು ಇವರಿಗೆ ಹಾಗೂ ಸಹಕಾರ ಇಲಾಖೆಯ ಸಿಬ್ಬಂದಿಗೂ ಹಾಗೂ ಸೊಸೈಟಿಯ ಎಲ್ಲಾ ಷೇರುದಾರರಿಗೆ, ಗ್ರಾಹಕರುಗಳಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಭೆಯಲ್ಲಿ ಧನ್ಯವಾದ ತಿಳಿಸಿದರು. 

ನಂತರ 25 ವರ್ಷಗಳಿಂದ ಸೊಸೈಟಿಯಲ್ಲಿ ಉತ್ತಮ ವ್ಯವಹಾರ ಮಾಡಿ ಹಾಗೂ ಅತಿ ಹೆಚ್ಚಿನ ಠೇವಣಿ ಮಾಡಿದ ಷೇರುದಾರರು ಹಾಗೂ ಸಾಲವನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿದ ಸದಸ್ಯರುಗಳಿಗೆ ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಲಾಯಿತು. 

25 ವರ್ಷಗಳಿಂದ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೊಸೈಟಿಯ ಕಾರ್ಯದರ್ಶಿ  ಡಿ.ಸಿ. ಪ್ರಶಾಂತ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಮತ್ತು ಪಿಗ್ಮಿ ಹಾಗೂ ಸಾಲ ವಸೂಲಿಗಾರರಿಗೂ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಲಾಯಿತು.

ಉಪಾಧ್ಯಕ್ಷರಾದ ಎಸ್.ವಿ. ರಾಮದಾಸ್, ನಿರ್ದೇಶಕರಾದ ಎ. ನಾಗರಾಜ್, ಈ. ಶಾಂತರಾಮ್, ಸಿ.ವಿ. ರವೀಂದ್ರಬಾಬು, ಈ. ರಾಜಣ್ಣ, ಎನ್.ಎಸ್. ಜಗದೀಶ್‌ಗೌಡ್ರು, ರೂಪ ಜಿ. ಗೋವಿಂದರಾಜ್, ಕೆ.ಎಸ್. ವಸಂತಕುಮಾರ್, ಟಿ. ಪರಶುರಾಮ್ ಉಪಸ್ಥಿತರಿದ್ದರು.

error: Content is protected !!