ರಾಜ್ಯ ಮಟ್ಟದ ಪವರ್‌ ಲಿಫ್ಟಿಂಗ್ ಬೆಂಚ್‍ಪ್ರೆಸ್ ಸ್ಪರ್ಧೆ ಮಗನಿಗೆ 2 ಚಿನ್ನ, ಅಪ್ಪನಿಗೆ 2 ಕಂಚು

ರಾಜ್ಯ ಮಟ್ಟದ ಪವರ್‌ ಲಿಫ್ಟಿಂಗ್ ಬೆಂಚ್‍ಪ್ರೆಸ್ ಸ್ಪರ್ಧೆ ಮಗನಿಗೆ 2 ಚಿನ್ನ, ಅಪ್ಪನಿಗೆ 2 ಕಂಚು

ದಾವಣಗೆರೆ, ಸೆ. 23- ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಕಳೆದ ವಾರ ನಡೆದ 2024-25ರ ರಾಜ್ಯಮಟ್ಟದ ಪವರ್ ಲಿಫ್ಟಿಂಗ್‌ ಬೆಂಚ್‌ಪ್ರೆಸ್ ಸ್ಪರ್ಧೆಯಲ್ಲಿ ಶ್ರೀ ಕನ್ನಿಕಾಪರಮೇಶ್ವರಿ ಕೋ – ಆಪರೇಟಿವ್ ಬ್ಯಾಂಕಿನ ಉದ್ಯೋಗಿ ವಿ. ರಕ್ಷಿತ್ ಹಾಗೂ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟು ಅವರು 93 ಕೆ.ಜಿ. ತೂಕದಲ್ಲಿ ಕ್ರಮವಾಗಿ 2 ವಿಭಾಗಗಳ ಸ್ಪರ್ಧೆಯಲ್ಲಿ ಸ್ಪರ್ಧಿಸಿ 182.5 ಕೆ.ಜಿ. ಮತ್ತು 140 ಕೆ.ಜಿ. ಭಾರ ಎತ್ತಿ ಎರಡೂ ವಿಭಾಗಗಳಲ್ಲಿಯೂ ವಿಜೇತರಾಗಿ 2 ಚಿನ್ನದ ಪದಕ ಗಳಿಸಿದ್ದಾರೆ.

ಇದೇ ಸ್ಪರ್ಧೆಯಲ್ಲಿ ರಕ್ಷಿತ್ ಅವರ ತಂದೆ ಕ್ರೀಡಾ ತರಬೇತುದಾರ ಪಿ. ವಿಶ್ವನಾಥ್ ಈ ಎರಡೂ ವಿಭಾಗಗಳ ಸ್ಪರ್ಧೆಯಲ್ಲಿ ಸ್ಪರ್ಧಿಸಿ 2 ಕಂಚಿನ ಪದಕ ಪಡೆದಿದ್ದು, ಬರುವ ಅಕ್ಟೋಬರ್ 14 ರಿಂದ 18ರವರೆಗೆ ಗೋವಾದಲ್ಲಿ ನಡೆಯಲಿರುವ 2024-25ರ ರಾಷ್ಟ್ರಮಟ್ಟದ ಪವರ್‌ ಲಿಫ್ಟಿಂಗ್ ಬೆಂಚ್‌ಪ್ರೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿಜೇತರಾದ ತಂದೆ – ಮಗನನ್ನು ಶ್ರೀ ಕನ್ನಿಕಾಪರಮೇಶ್ವರಿ ಕೋ ಆಪರೆಟೀವ್ ಬ್ಯಾಂಕಿನ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ, ಮಾಜಿ ಅಧ್ಯಕ್ಷ ಆರ್.ಎಲ್ ಪ್ರಭಾಕರ್, ಮೇಯರ್ ಬಿ.ಹೆಚ್. ವಿನಾಯಕ, ಶಶಿ ಸೋಪ್ ಸಂಸ್ಥೆಯ ಮಾಲೀಕ ರವಿ ಇಳಂಗೋ, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್,  ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಪೊಲೀಸ್ ಅಧಿಕಾರಿ ಮತ್ತು ಕ್ರೀಡಾಪಟು ದಂಪತಿಗಳಾದ ಹೆಚ್. ದಾದಾಪೀರ್ ಮತ್ತು ಕೆ.ಎನ್. ಶೈಲಜಾ ದಾದಾಪೀರ್,   ಪಾಲಿಕೆ ಸದಸ್ಯ ಜೆ.ಎನ್ ಶ್ರೀನಿವಾಸ್, ದೂಡಾ ಮಾಜಿ ಅಧ್ಯಕ್ಷ ಡಿ. ಮಾಲತೇಶ್ ಪೈಲ್ವಾನ್ ಅಭಿನಂದಿಸಿದ್ದಾರೆ.

error: Content is protected !!